ಮುಂಡಗೋಡ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕಾಧ್ಯಕ್ಷರಾಗಿ ಅಣ್ಣುಕುಮಾರ ಖಟಾವಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಸಂಘದ ಸಭೆಯಲ್ಲಿ ಕರಾವಳಿ ಮುಂಜಾವು ಪತ್ರಿಕೆಯ ವರದಿಗಾರ ಅಣ್ಣುಕುಮಾರ ಖಟಾವಕರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಹಲೋ ಮುಂಡಗೋಡ ಪತ್ರಿಕೆಯ ರಾಜಶೇಖರ ನಾಯ್ಕ, ಕಾರ್ಯದರ್ಶಿಯಾಗಿ ಜನಮಾಧ್ಯಮ ಪತ್ರಿಕೆಯ ರಾಮಸ್ವಾಮಿ ಅಂಡಗಿ, ಸದಸ್ಯರಾಗಿ ಚಂದ್ರಶೇಖರಯ್ಯ ಹಿರೇಮಠ, ಅವಿನಾಶ ಕೋರಿ, ಸಚಿನ ನಾಯ್ಕ ಆಯ್ಕೆಯಾಗಿದ್ದಾರೆ.