ಶಿರಸಿ: ಇಲ್ಲಿನ ಶಬರ ಸಂಸ್ಥೆ ಹಾಗೂ ಉಪೇಂದ್ರ ಪೈ ಸೇವಾ ಟ್ರಸ್ಟ ಸಂಯುಕ್ತ ಸಹಕಾರದಲ್ಲಿ ಭೌಮಾಸುರ ಕಾಳಗ ಯಕ್ಷಗಾನ ಹಾಗೂ ಸನ್ಮಾನ ಸಮಾರಂಭ ತಾಲೂಕಿನ ಕಡಬಾಳ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ಜೂ.18ರ ರಾತ್ರಿ 9 ರಿಂದ ನಡೆಯಲಿದೆ.
ಯಕ್ಷಗಾನದ ಉದ್ಘಾಟನೆಯನ್ನು ಉಪೇಂದ್ರ ಪೈ ಸೇವಾ ಟ್ರಸ್ಟ ಅಧ್ಯಕ್ಷ ಉಪೇಂದ್ರ ಪೈ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ ತಿಮ್ಮಣ್ಣ ಮ ಹೆಗಡೆ ವಹಿಸಲಿದ್ದಾರೆ. ಅತಿಥಿಗಳಾಗಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಗುರುಮೂರ್ತಿ ಹೆಗಡೆ, ಗ್ರಾ.ಪಂ.ಸದಸ್ಯೆ ಅನಸೂಯಾ ಅ.ಹೆಗಡೆ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಯಕ್ಷಗಾನದ ಬಾಲ ಕಲಾವಿದೆ, ಇಂಡಿಯಾ ಬುಕ್ ಆಪ್ ರೆಕಾರ್ಡನ ತುಳಸಿ ಹೆಗಡೆ ಅವರನ್ನು ಗೌರವಿಸಲಾಗುತ್ತಿದೆ.
ಬಳಿಕ ಯಕ್ಷಗಾನದ ರಾಮಕೃಷ್ಣ ಹೆಗಡೆ ಹಿಲ್ಲೂರು, ಅನಿರುದ್ಧ ಬೆಣ್ಣೆಮನೆ, ಪ್ರಸನ್ನ ಹೆಗ್ಗಾರ ಹಿಮ್ಮೇಳದಲ್ಲಿ ಹಾಗೂ ಅಶೋಕ ಭಟ್ಟ ಸಿದ್ದಾಪುರ, ಉದಯ ಕಡಬಾಳ, ಶ್ರೀಧರ ಚಪ್ಪರಮನೆ, ನಾಗರಾಜ ಕುಂಕಿಪಾಳ, ನಿರಂಜನ ಜಾಗನಳ್ಳಿ, ಸಂತೋಷ ಕಡಕಿನಬೈಲು ಪಾಲ್ಗೊಳ್ಳುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡ ಸಹಕಾರ ನೀಡಿದೆ ಎಂದು ಶಬರ ಸಂಸ್ಥೆ ಮುಖ್ಯಸ್ಥ ನಾಗರಾಜ್ ಜೋಶಿ ತಿಳಿಸಿದ್ದಾರೆ.
ಜೂ.18ಕ್ಕೆ ಭೌಮಾಸುರ ಕಾಳಗ ಯಕ್ಷಗಾನ
