ಶಿರಸಿ: ಓಡುತ್ತಿರುವ ಈ ಕಾಲಮಾನದಲ್ಲಿ ಜಾಲತಾಣಗಳನ್ನೆ ಹೆಚ್ಚಾಗಿ, ಅದರಲ್ಲೆ ಮುಳುಗಿರುವ ಮಕ್ಕಳಿಗೆ ಸಂಸ್ಕಾರವನ್ನು ನೀಡುವ ಕೆಲಸವನ್ನು ಇಂತಹ ರಾಷ್ಟೀಯ ಸೇವಾ ಯೋಜನೆಯ ಶಿಬಿರಗಳು ಮಾಡುತ್ತಿವೆ,ಹಾಗೂ ಅದನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡರೆ ಒಳೆಯದು ಎಂದು ಎಂ ಇ ಎಸ್ ಸದಸ್ಯ ಸುರೇಶ್ಚಂದ್ರ ಹೆಗಡೆ ಕೆಶಿನಮನೆ ಹೇಳಿದರು.
ಗೋಳಿಯಲ್ಲಿ ಹಮ್ಮಿಕೊಂಡಿದ್ದ ಎಮ್.ಇ.ಎಸ್ ,ಎಮ್.ಎಮ್ ಕಲಾ & ವಿಜ್ನಾನ ಮಹಾವಿದ್ಯಾಲಯದ ರಾಷ್ಟೀಯ ಸೇವಾ ಯೋಜನೆಯ ಏಳನೆ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪೂರ್ವಜರು ನಡೆಸಿಕೊಂಡು ಬಂದ ಸಂಸ್ಕಾರವನ್ನು ಉಳಿಸಿಕೊಂಡು ಹೋಗುವುದು ನಮ್ಮ ಕೈಲಿದೆ ಹಾಗೆಯೇ ಬದುಕಿನಲ್ಲಿ ಎಷ್ಟೇ ಕಷ್ಟವಿದ್ದರೂ ಜಯಿಸುತ್ತೇನೆ ಎಂಬ ಧೈರ್ಯವನ್ನು ಬೆಳೆಸಿಕೊಂಡು ದುಡಿಮೆಯಲ್ಲಿನ ಒಂದು ಪಾಲುನ್ನು ಸಮಾಜಕ್ಕಾಗಿ ಮೀಸಲಿಡಿ ಎಂಬ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಇನ್ನೊರ್ವ ಅಥಿತಿಗಳಾದ ಹಾರುಗಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಗುರುಪಾದ ಹೆಗಡೆ ಅವರು ಪಠ್ಯ ಶಿಕ್ಷಣವನ್ನು ಹೊರತುಪಡಿಸಿ ಪ್ರಾಪಂಚಿಕ ಶಿಕ್ಷಣವನ್ನು ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆ ,ಸಹಾಯವನ್ನು ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡು, ನಾನು ಎನ್ನುವುದಕ್ಕಿಂತ ನಾವು ಎನ್ನುವುದನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಟಿ.ಸ್ ಹಳೆಮನೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ,ಒಂದು ವಾರ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳ ನಾಯಕತದ,ಜವಾಬ್ಧಾರಿಯ ಗುಣವನ್ನು ಅಭಿನಂದಿಸಿ, ಶಿಬಿರದ ನಿಜವಾದ ತರಬೇತಿಗಳು ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಕಂಡುಬರುತ್ತವೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಏಳು ದಿನಗಳ ಕಾಲ ಶಿಬಿರದ ವಿಧ್ಯಾರ್ಥಿಗಳ ಸಂಪೂರ್ಣ ಊಟ,ವಸತಿ ,ಇನ್ನಿತರೆ ಕಾರ್ಯಗಳ ವ್ಯವಸ್ಥೆ ಮಾಡಿದ ರಾಜೇದ್ರ ಹೆಗಡೆ ಹಾಗೂ ನರೇಂದ್ರ ರಾವ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಧ್ಯಾಪಕರಾದ ಕೆ ಎನ್ ರೆಡ್ಡಿ,ಜಿಲ್ಲಾ ಎನ್ ಎಸ್ ಎಸ್ ನೋಡಲ್ ಅಧಿಕಾರಿ ಪ್ರೊ.ಜಿ.ಟಿ ಭಟ್ ಹಾಗೂ ಎನ್ ಎಸ್ ಎಸ್ ಅಧಿಕಾರ ಡಾ.ಆರ್.ಆರ್ ಹೆಗಡೆ, ಡಾ ದಿವ್ಯಾ ಹೆಗಡೆ, ಪ್ರೊ ಹರ್ಷಿತಾ ಉಪಸ್ಥಿತರಿದ್ದರು.