ಯಲ್ಲಾಪುರ; ಬಂಕಾಪುರ ರಸ್ತೆಯ ಹುದ್ದಾರ ಕಟ್ಟಡದಲ್ಲಿ ಗ್ರಾಮೀಣ ಭಾಗದ ಸ್ವ-ಸಹಾಯ ಗುಂಪಿನ ಸದಸ್ಯರೆಲ್ಲರೂ ಸೇರಿ ಜನಸ್ಪೂರ್ತಿ ಸ್ವಸಹಾಯ ಗುಂಪುಗಳ ಒಕ್ಕೂಟದ ನಾಯಕತ್ವದಡಿ ರಚಿಸಿದ ಸ್ತ್ರೀಚೈತನ್ಯ ಸೌಹಾರ್ದ ಸಹಕಾರಿ ಸಹಕಾರಿ ಸಂಘವನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ರೇಣುಕಾ ಹಾವೇರಿ ಉದ್ಘಾಟಿಸಿ ಮಾತನಾಡಿದರು.
ನಿರ್ದಿಷ್ಟ ಗುರಿ ಹಾಗೂ ಧೈರ್ಯದೊಂದಿಗೆ ಮುನ್ನುಗ್ಗಿದಾಗ ಯಾವುದೇ ಕ್ಷೇತ್ರದಲ್ಲಿ ಹೆಣ್ಣು ಉನ್ನತಿಯನ್ನು ಸಾಧಿಸಬಹುದು. ಗ್ರಾಮೀಣ ಭಾಗದ ಸ್ವ-ಸಹಾಯ ಸಂಘದ ಮಹಿಳೆಯರೆಲ್ಲರೂ ಸೇರಿ ಪಟ್ಟಣದಲ್ಲಿ ಸೌಹಾರ್ದ ಸಹಕಾರಿ ಬ್ಯಾಂಕನ್ನು ಆರಂಭಿಸಿರುವುದು ಮಹಿಳೆಯರ ಸಬಲೀಕರಣಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಧಾರವಾಡ ಜಿಲ್ಲಾ ಸಾಮಾಜಿಕ ತಜ್ಞೆ, ಕೆರೆ ಅಭಿವೃದ್ಧಿ ಯೋಜನೆಯ ಇಂದಿರಾ ಎಸ್. ಹುದ್ದಾರ ಅವರು, ಪ್ರತಿ ಮಹಿಳೆಯಲ್ಲೂ ಸ್ತ್ರೀ ಹಾಗೂ ಪುರುಷ ಇವರಿಬ್ಬರ ಶಕ್ತಿ ಇರುವದರಿಂದ ಸವಾಲಿಗೆ ಹಿಂದೇಟು ಹಾಕದೇ, ಅಳುಕದೇ ಮುನ್ನುಗ್ಗುವ ಮನೋಭಾವ ಬೆಳೆಸಿಕೊಳ್ಳಲು ಮಹಿಳೆಯರಿಗೆ ಕರೆ ನೀಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಸಂಯುಕ್ತ ಸಹಕಾರಿಯ ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಸಂಯೋಜಕ ಸಂತೋಷ ಎಂ.ಜೆ., ಪಟ್ಟಣ ಪಂಚಾಯತಿ ಸದಸ್ಯೆ ರಾಜೇಶ್ವರಿ ಅಂಡಗಿ, ಸೌಹಾರ್ಧ ಸಹಕಾರಿಯ ಅಧ್ಯಕ್ಷೆ ಮಹಾಲಕ್ಷಿ ನಾಯ್ಕ ಮಾತನಾಡಿದರು. ಉಪಾಧ್ಯಕ್ಷೆ ಪುಷ್ಪಾ ಕೊರವರ, ಆಡಳಿತ ಮಂಡಳಿ ನಿರ್ದೇಶಕರು, ಶೇರು ದಾರರು, ಸಿಬ್ಬಂದಿ ಹಾಗೂ ಮಲೆನಾಡು ಕ್ರೆಡಿಟ್ ಸೌಹಾರ್ದ ಸಹಕಾರಿಯ ಸಿಇಒ ಜಾನಿ ಲೊಪಿಸ್ ಇದ್ದರು.ಅನ್ನು ಸಿದ್ಧಿ ಪ್ರಾರ್ಥಿಸಿದರು.ಸ್ತ್ರೀ ಚೈತನ್ಯ ಸೌಹಾರ್ದ ಸಹಕಾರಿಯ ನೂತನ ಸಿಇಒ ಸುಮತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು