ಹಳಿಯಾಳ: ಪಟ್ಟಣದ ಚಂದಾವನ ನಿಸರ್ಗ ಪ್ರವಾಸಿ ತಾಣದಲ್ಲಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ನಡೆಯಿತು.
ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ 2022-25ನೇ ಸಾಲಿಗೆ ಅಧ್ಯಕ್ಷರಾಗಿ ಪ್ರಜಾವಾಣಿ ಪ್ರತಿಕೆ ವರದಿಗಾರ ಸಂತೋಷ ಹಬ್ಬು ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ವಿಜಯ ಕರ್ನಾಟಕ ವರದಿಗಾರ ಮಂಜುನಾಥ ಶೇರಖಾನೆ ಅವಿರೋಧವಾಗಿ ಆಯ್ಕೆಯಾಗಿದರು. ಸಭೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಮಂಡಳಿಗೆ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿರುವ ವಿಜಯ ಸಂದೇಶ ವಾರಪತ್ರಿಕೆಯ ಸಂಪಾದಕಿ ಸುಮಂಗಲಾ ಅಂಗಡಿಯವರನ್ನು ಹಾಗೂ ಕಾರ್ಯ ಕಾರಣಿ ಮಂಡಳಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಸಂಯುಕ್ತ ಕರ್ನಾಟಕ ವರದಿಗಾರ ಓರ್ವಿಲ್ಡ್ ಫರ್ನಾಂಡೀಸ್ ಅವರನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ರಾಜ್ಯ ಸಂಘದ ಸದಸ್ಯತ್ವ ನವೀಕರಿಸಿದ ಸದಸ್ಯರಿಗೆ ನೂತನ ಗುರುತಿನ ಚೀಟಿ ವಿತರಿಸಲಾಯಿತು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಂತೋಷ ಹಬ್ಬು ಆಯ್ಕೆ
