ಕುಮಟಾ: ಹೆರವಟ್ಟಾದ ರೈಲ್ವೆ ಸೇತುವೆ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಸಿಯ ರಾಗಿಹೊಸಳ್ಳಿ ಹೆಬ್ರಿ ನಿವಾಸಿ ರಾಜೇಶ ಅಂಬಿಗ, ಲಕ್ಶ್ಮಣ ಅಂಬಿಗ ಮತ್ತು ರಾಮನಗರದ ಬಿಡದಿ ನಿವಾಸಿ ಗಣೇಶಮೂರ್ತಿ ಬಂಧಿತ ಆರೋಪಿಗಳು. ಈ ಮೂವರು ಫೋರ್ಡ್ ಕಾರಿನಲ್ಲಿ 495 ಗ್ರಾಂ ಗಾಂಜಾ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು.
ಈ ವೇಳೆ ಸಾಗಾಣಿಕೆಗೆ ಬಳಸಲಾದ ಕಾರನ್ನ ಕೂಡ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಿಐ ತಿಮ್ಮಪ್ಪ ನಾಯ್ಕ ಮಾರ್ಗದರ್ಶನದಲ್ಲಿ ಪಿಎಸ್‌ಐ ರವಿ ಗುಡ್ಡಿ ನೇತೃತ್ವದ ತಂಡ ಪಾಲ್ಗೊಂಡಿತ್ತು.