• Slide
    Slide
    Slide
    previous arrow
    next arrow
  • ಉತ್ತರಕನ್ನಡ ಜಿಲ್ಲೆ ಪ್ರತಿಭಾವಂತರ ಕೇಂದ್ರ;ದಿನಕರ ಶೆಟ್ಟಿ

    300x250 AD

    ಕುಮಟಾ:ಜನಪರ ವೇದಿಕೆ ಹಮ್ಮಿಕೊಂಡ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದುವ ಮೂಲಕ, ಎಲ್ಲಾ ವಿಭಾಗಗಳಿಗೂ ಕೊಡುಗೆ ಸಲ್ಲಿಸುವ ಮೂಲಕ ಉತ್ತರಕನ್ನಡ ಜಿಲ್ಲೆ ಪ್ರತಿಭಾವಂತರ ಕೇಂದ್ರವಾಗಿ ರೂಪುಗೊಂಡಿದೆ ಎಂದು ಹೇಳಿದರು.

    ಗುಣಮಟ್ಟದ ಶಿಕ್ಷಣದ ಜೊತೆಗೆ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುತ್ತಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಅತ್ಯಂತ ಗುಣಮಟ್ಟದ ಶಿಕ್ಷಣ ಕೊಡುತ್ತಿದೆ. ಜೊತೆಗೆ ತಾಲ್ಲೂಕಿಗೆ ಪ್ರತಿವರ್ಷವೂ ದಾಖಲೆಯ ರ‍್ಯಾಂಕ್‌ ಗಳನ್ನು ತರುವ ಮೂಲಕ ಸಾಧನೆ ಮಾಡುತ್ತಿರುವುದು ಸಂತಸದಾಯಕ ವಿಚಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲಾ ವಿದ್ಯಾರ್ಥಿಗಳಾದ ದೀಕ್ಷಾ ಪಾಂಡುರಂಗ ನಾಯ್ಕ, ಮೇಘನಾ ವಿಷ್ಣು ಭಟ್ಟ, ಸಂಜನಾ ಜಯರಾಮ ಭಟ್ಟ, ಕಾರ್ತಿಕ ಎಸ್. ಭಟ್ಟ ಅವರನ್ನು ಸನ್ಮಾನಿಸಲಾಯಿತು.

    300x250 AD

    ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಎಂ.ಜಿ.ಭಟ್ಟ, ಮಂಡಲದ ಅಧ್ಯಕ್ಷ ಹೇಮಂತ ಕುಮಾರ್ ಗಾಂವಕರ, ಜಿಲ್ಲಾ ಪ್ರಭಾರಿ ನಾಗರಾಜ ನಾಯಕ ತೊರ್ಕೆ, ಕನ್ನಡ ಸಂಘದ ಸದಾನಂದ ದೇಶಭಂಡಾರಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮೋಹಿನಿ ಗೌಡ, ವಕೀಲ ವಿನಾಯಕ ಪಟಗಾರ ಇದ್ದರು. ಜಯಾ ಶೇಟ್ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ವಹಿಸಿದರು. ಮಹೇಶ್ ಮೊಗೇರ ಭಟ್ಕಳ, ದಯಾನಂದ ದೇಶಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top