ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀವಿನಾಯಕ ದೇವರಿಗೆ 74 ಗ್ರಾಂ ಚಿನ್ನದ ಸರವನ್ನು ಉದ್ಯಮಿ ಶ್ರೀಕಾಂತ ನಾಯ್ಕ ನೀಡಿದರು. ಬಳಿಕ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಕಾಣಿಕೆ ನೀಡಿದ ಹಿನ್ನಲೆಯಲ್ಲಿ ಶ್ರೀಕಾಂತ ನಾಯ್ಕ ಅವರನ್ನು ಸನ್ಮಾನಿಸಿ ದೇಗುಲದಿಂದ ಗೌರವಿಸಿದರು. ಇದೇ ವೇಳೆ ಕುಟುಂಬದವರು ಹಾಜರಿದ್ದರು.
ಇಡಗುಂಜಿ ಶ್ರೀವಿನಾಯಕ ದೇವರಿಗೆ ಚಿನ್ನದ ಸರ ಸಮರ್ಪಣೆ
