• first
  second
  third
  previous arrow
  next arrow
 • ಜೂ.19ಕ್ಕೆ ಯೋಗದ ಮಹತ್ವ ಕುರಿತು ಸಂವಾದ, ಪ್ರಾತ್ಯಕ್ಷಿಕೆ ಕಾರ್ಯಕ್ರಮ

  300x250 AD

  ಶಿರಸಿ: ಐ.ಎಂ.ಎ. ಮಹಿಳಾ ವೈದ್ಯರ ಘಟಕ ಶಿರಸಿ ಮತ್ತು ಇನ್ನರ್ ವೀಲ್ ಕ್ಲಬ್ ಶಿರಸಿಯವರ ಸಂಯುಕ್ತ ಆಶ್ರಯದಲ್ಲಿ ಶಿರಸಿಯ ಇತರ ಮಹಿಳಾ ಸಂಘಟನೆಗಳ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಮಹಿಳೆಯರ ಆರೋಗ್ಯ ರಕ್ಷಣೆಯಲ್ಲಿ ಯೋಗದ ಮಹತ್ವ ಕುರಿತು ಸಂವಾದ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
  ಜೂ.19 ರವಿವಾರ, ಸಂಜೆ 4 ಗಂಟೆಗೆ ನಗರದ ಎಲ್ಐಸಿ ಕಛೇರಿಯ ಹಿಂಭಾಗದಲ್ಲಿರುವ ಐಎಂಎ ಸುವರ್ಣ ಸೌಧದಲ್ಲಿ ಕಾರ್ಯಕ್ರಮವು ನಡೆಯಲಿದ್ದು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ, ಅಂತಾರಾಷ್ಟ್ರೀಯ ಖ್ಯಾತ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಬೆಂಗಳೂರು, ಹಾಗೂ ಯೋಗ ಮತ್ತು ಖ್ಯಾತ ಆಯುರ್ವೆದ ತಜ್ಞೆ ಡಾ. ಮಮತಾ ಭಾಗವತ್, ಬೆಂಗಳೂರು ಉಪಸ್ಥಿತರಿರುತ್ತಾರೆ.
  ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top