
ಮುಂಡಗೋಡ: ಮಳಗಿಯ ಧರ್ಮಾ ಜಲಾಶಯದ ಸನಿಹದಲ್ಲಿ ಕಡಿಮೆ ಬೆಲೆಗೆ ಬಂಗಾರ ಕೊಡುವುದಾಗಿ ನಂಬಿಸಿ 22 ಲಕ್ಷ ರೂಪಾಯಿ ಬ್ಯಾಗಿರುವ ಹಣ ಕಿತ್ತುಕೊಂಡು ಹೋಗಿದ್ದ ದರೋಡೆ ಪ್ರಕರಣದಲ್ಲಿ ಶಿಕಾರಿಪುರ ತಾಲೂಕಿನ ಹೊಸೂರ ಗ್ರಾಮದ ಮೂರು ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಸಮೇತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜುಲೈ.16ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದ ಶಿವನಗೌಡ ಪಾಟೀಲ ಮತ್ತು ಆತನ ಸ್ನೇಹಿತ ಅಸ್ಲಂ ನದಾಫ, ಕಾರಿನಲ್ಲಿ ಹಣ ತೆಗೆದುಕೊಂಡು ಧರ್ಮಾ ಕಾಲೋನಿಗೆ ಬಂದಿದ್ದರು. ಕಡಿಮೆ ಬೆಲೆಯಲ್ಲಿ ಬಂಗಾರ ನೀಡುವುದಾಗಿ ನಂಬಿಸಿದ್ದ 22 ಲಕ್ಷ ರೂಪಾಯಿ ಹಣದ ಬ್ಯಾಗನ್ನು ಎಗರಿಸಿ ದರೋಡಿ ಮಾಡಿದ್ದ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಘಟನೆಯ ವಿವರ: ಆರೋಪಿತರು ಫಿರ್ಯಾದಿಗೆ ಫೋನ್ ಮಾಡಿ ನನಗೆ ಹಳೆ ಕಾಲದ ಬಂಗಾರ ಸಿಕ್ಕಿದೆ. ಅದು ನನ್ನ ಹತ್ತಿ ಇದ್ದರೆ ಸಮಸ್ಯೆ ಆಗುತ್ತದೆ 1ಕಿಲೋ ಬಂಗಾರಕ್ಕೆ 10 ಲಕ್ಷ ಕೊಡುವುದಾಗಿ ಮಾತನಾಡಿದ್ದಾರೆ. ಅದನ್ನು ನಂಬಿದ ಫಿರ್ಯಾದಿ ಶಾಂಪಲ್ ಒಂದೆರಡು ನಾಣ್ಯವನ್ನು ಕೇಳಿದ್ದಾನೆ. ಶಿರಶಿಯ ಅರುಂಧತಿ ಕಾರ್ ಶೊರುಂ ಹತ್ತಿರ ಕರೆದು ಎರಡು ನಾಣ್ಯವನ್ನು ನೀಡಿದ್ದಾರೆ. ಫಿರ್ಯಾದಿ ಅವನ್ನು ಚೆಕ್ ಮಾಡಿಸಿದಾಗ ಬಂಗಾರ ಇರುವುದು ನಿಜವಾಗಿದೆ. ನಂತರ ಎರಡು ಕಿಲೋ ಬಂಗಾರ ಖರೀದಿಗೆ 20 ಲಕ್ಷ ರೂಪಾಯಿ ತಂದಿದ್ದಾನೆ. ಹಣ ತಂದ ಬ್ಯಾಗನ್ನು ಗಮನಿಸಿದ ಆರೋಪಿತರು ನಕಲಿ ಚಿನ್ನದ ಬ್ಯಾಗನ್ನು ಕೊಡಲು ಮುಂದಾಗಿದ್ದಾರೆ. ಫಿರ್ಯಾದಿಗೆ ಅವರ ಮೇಲೆ ಸಂಶಯ ಬಂದಿದೆ. ನಾನು ಆಸಿಡ ಹಾಕಿ ಚೆಕ್ ಮಾಡುತ್ತೇನೆ ಎಂದಾಗ ಆರೋಪಿತರು ಆಸಿಡ್ ಇರುವುದನ್ನು ದೂಡಿ ಆತನ ಕೈಯಲ್ಲಿದ್ದ ಬ್ಯಾಗನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಪ್ರಕರಣ ಬೇಧಿಸಲು ಮುಂದಾದ ಪೆÇಲೀಸರು ಆರೋಪಿಗಳ ಪತ್ತೆಯ ಕಾರ್ಯಕ್ಕೆ ಮುಂದಾದಾಗ ಶಿಕಾರಿಪುರ ತಾಲೂಕಿನ ಹೊಸೂರ ಗ್ರಾಮದ ಏಳು ಜನರಲ್ಲಿ ನಾಲ್ಕು ಜನರು ತಲೆಮರೆಸಿಕೊಂಡಿದ್ದಾರೆ ಕೃತ್ಯಕ್ಕೆ ಬಳಸಿದ ಕಾರನ್ನು ಮೂರು ಜನ ಆರೋಪಿತರು ಹಾಗೂ ಬಂಧಿಸಿ ನ್ಯಾಯಾಂಗಕ್ಕೆ ಹಾಜರು ಮಾಡಿದ್ದಾರೆ.
ಜಿಲ್ಲಾ ಎಸ್.ಪಿ ಶಿವಪ್ರಕಾಶ ದೇವರಾಜು, ಎಡಿಶನಲ್ ಎಸ್.ಪಿ ಬದರಿನಾಥ, ಶಿರಸಿ ಡಿಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಪ್ರಭುಗೌಡ ಡಿ.ಕೆ., ಪಿಎಸ್‍ಗಳಾದಎನ್.ಡಿ.ಜಕ್ಕಣ್ಣವರ, ಬಸವರಾಜ ಮಬನೂರ ತಂಡದವರು ಕಾರ್ಯಾಚರಣೆಲ್ಲಿ ಪಲ್ಗೊಂಡಿದ್ದರು.