ಜೋಯಿಡಾ: ತಾಲೂಕಿನ ರಾಮನಗರದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ರಾಮನಗರದ ದುರ್ಗಾದೇವಿ ದೇವಸ್ಥಾನದ ಬಳಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಶ್ರೀಕಾಂತ್ ನಾಯ್ಕ, ನಮ್ಮ ಧರ್ಮಸ್ಥಳ ಸಂಘದಿಂದ ವರ್ಷವೂ ಜೂನ್ ತಿಂಗಳಲ್ಲಿ ನಾವು ಪರಿಸರ ದಿನಾಚರಣೆ ಮಾಡುತ್ತೇವೆ. ಈ ವರ್ಷ ರಾಮನಗರ ಭಾಗದಲ್ಲಿ ಪರಿಸರ ದಿನವನ್ನು ಆಚರಿಸಿ ದೇವಾಲಯದ ಆವರಣದಲ್ಲಿ ಗಿಡ ನೆಟ್ಟಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರಾಮನಗರದ ಸ್ಥಳೀಯರಾದ ದೀಪಾ ಮಹಾಲೆ, ಸುಹಾಸಿನಿ ಸೋಲೆಕರ, ಮಂಜುನಾಥ ನಾಯ್ಕ, ಲಕ್ಷ್ಮಣ ಜಾದವ್, ಮಂಜುನಾಥ ದೇಸಾಯಿ, ಮುಕುಂದ ಅಲಿಪುರ, ಸದಾನಂದ ಗಾವಡೆ, ಕಿರಣ ದೇವಿದಾಸ ಇತರರು ಇದ್ದರು.