ಹಳಿಯಾಳ: ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಪೂರ್ವಭಾವಿ ಯೋಗ ಶಿಬಿರವನ್ನು ಪತಂಜಲಿ ಯೋಗ ಶಿಕ್ಷಕ ಐ ಎಸ್ ಕಾಜಗಾರ ಉದ್ಘಾಟಿಸಿ ಮಾತನಾಡಿದರು.
ಭಾರತ ಬಲಿಷ್ಠ ರಾಷ್ಟ್ರವಾಗಬೇಕಾದರೆ ಯುವಕರು ಸದೃಢರಾಗಬೇಕು. ಆರೋಗ್ಯವಂತ ಸಮಾಜ ನಮ್ಮದಾಗಬೇಕು. ಯೋಗವನ್ನು ಅಳವಡಿಸಿಕೊಂಡರೆ ಮಾತ್ರ ಇದು ಸಾಧ್ಯವಿದೆ ಎಂದು ಹೇಳಿದರು.
ಜೂ.21ರವರೆಗೆ ನಡೆಯುವ ಯೋಗ ಶಿಬಿರದಲ್ಲಿ ಯೋಗ ಶಿಕ್ಷಕ ಐಎಸ್ ಕಾಜಗಾರರವರು ಯೋಗದ ಮಹತ್ವ, ಪ್ರಾಣಾಯಾಮ, ವಿವಿಧ ಆಸನಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡಲಿದ್ದಾರೆ. ಕಿರಿಯ ತರಬೇತಿ ಅಧಿಕಾರಿ ದಿನೇಶ ಅಡಕಾರ ಯೋಗ ಶಿಬಿರವನ್ನು ಸಂಯೋಜಿಸಿದ್ದರು.