ದಾಂಡೇಲಿ: ಉತ್ತರ ಪ್ರದೇಶ ಸರಕಾರವು ಪ್ರಯಾಗ್‌ರಾಜ್‌ನಲ್ಲಿ ಹಿಂಸಾಚಾರದ ಆರೋಪಿ ಜಾವೇದ್ ಮೊಹಮ್ಮದ್ ಅವರ ಮನೆಯನ್ನು ಕೆಡವಿರುವುದನ್ನು ಮಾಜಿ ನಗರಸಭಾ ಸದಸ್ಯ ರಾಮಲಿಂಗ ಜಾಧವ ಅವರು ಖಂಡಿಸಿದ್ದಾರೆ.
ಹಿಂಸಾಚಾರದ ಆರೋಪಿ ಜಾವೇದ್ ಮೊಹಮ್ಮದ್ ಈಗಾಗಲೆ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿದ್ದಾನೆ. ಬಂಧನದಲ್ಲಿರುವ ವ್ಯಕ್ತಿಯೊಬ್ಬನ ಮನೆಯನ್ನು ಕೆಡವಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕಾನೂನನ್ನು ಪಾಲಿಸಬೇಕಾದ ಜವಾಬ್ದಾರಿಯುತ ಸರಕಾರವೇ ಕಾನೂನನ್ನು ಉಲ್ಲಂಘಿಸಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.