ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ವಸತಿ ನಿಲಯಗಳಿಗೆ ಸೇರಲು 2022-23 ನೇ ಸಾಲಿನ ಆಯ್ಕೆಯಿಂದ ವಂಚಿತರಾದ 8ನೇ ತರಗತಿ ಹಾಗೂ ಪ್ರಥಮ ಪಿಯುಸಿ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯನ್ನು ಜೂ.23 ಮತ್ತು 24ರಂದು ಬೆಳಿಗ್ಗೆ 9.30ಕ್ಕೆ ವಿವಿಧ ಜಿಲ್ಲಾ ಕೇಂದ್ರದ ಕ್ರೀಡಾಂಗಣಗಳಲ್ಲಿ ನಡೆಸಲಾಗುತ್ತಿದೆ.
23ರಂದು ಅಥ್ಲೆಟಿಕ್ಸ್ ಮತ್ತು 24ರಂದು ಫುಟ್‌ಬಾಲ್ ಆಯ್ಕೆಗೆ ವಿದ್ಯಾನಗರದ ಸರಕಾರಿ ಕ್ರೀಡಾ ಪ್ರೌಢಶಾಲೆಯ ಕ್ರೀಡಾಂಗಣ, ಎರಡೂ ದಿನ ಸೈಕ್ಲಿಂಗ್ ಆಯ್ಕೆಗೆ ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ, ಜಿಮ್ನಾಸ್ಟಿಕ್ ಆಯ್ಕೆಗೆ ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣ, ಹಾಕಿ ಆಯ್ಕೆಗೆ ಬೆಂಗಳೂರಿನ ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣ, ಕುಸ್ತಿ ಹಾಗೂ ಜುಡೋ ಆಯ್ಕೆಗೆ ಬೆಳಗಾವಿಯ ನೆಹರೂ ಕ್ರೀಡಾಂಗಣ, ಫೆನ್ಸಿಂಗ್/ಆರ್ಚರಿ, ವಾಲಿಬಾಲ್, ಬಾಸ್ಕೆಟ್‌ಬಾಲ್ ಆಯ್ಕೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮೇಲೆ ತಿಳಿಸಿದ ದಿನಾಂಕಗಳಂದು ವರದಿ ಮಾಡಿಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೊಬೈಲ್ ಸಂಖ್ಯೆ: 94808 86551ಗೆ ಅಥವಾ dysskar@gmail.com ಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.