ಹೊನ್ನಾವರ: ತಾಲೂಕಿನ ಗೇರುಸೊಪ್ಪ ಅರಣ್ಯ ವಲಯ ವ್ಯಾಪ್ತಿಯ ಹೈಗುಂದ ಅರಣ್ಯ ಪ್ರದೇಶದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಬೀಜ ಬಿತ್ತೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಇರುವುದೊಂದೆ ಭೂಮಿ; ಬೀಜ ಬಿತ್ತೋಣ, ಅರಣ್ಯ ಉಳಿಸೋಣ ಎಂಬ ಧ್ಯೇಯ ವ್ಯಾಖ್ಯಾನದೊಂದಿಗೆ 9 ವಿವಿಧ ಜಾತಿಯ ಬೀಜಗಳ ಸಹಾಯದಿಂದ ಕರ್ನಾಟಕ ಭೂಪಟವನ್ನು ಚಿತ್ರಿಸಿದರು. ವೃತ್ತ ನಿರೀಕ್ಷಕ ಶ್ರೀಧರ್ ಎಸ್.ಆರ್., ಪಿಎಸ್‌ಐ ಆನಂದ್‌ಮೂರ್ತಿ, ಪೊಲೀಸ್ ಸಿಬ್ಬಂದಿ, ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ, ವಲಯ ಅರಣ್ಯಾಧಿಕಾರಿಗಳು, ಹೊನ್ನಾವರ ಹಾಗೂ ಗೇರುಸೊಪ್ಪ ವಲಯದ ಸಿಬ್ಬಂದಿ, ಹೆಸ್ಕಾಂ ಸಿಬ್ಬಂದಿ, ಹೆರಂಗಡಿ, ಅಡಕಾರ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರುಗಳು, ಸದಸ್ಯರು, ಆಶಾ ಕಾರ್ಯಕರ್ತರು, ಅಳ್ಳಂಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಶುಂಪಾಲರು, ಶಿಕ್ಷಕವೃಂದ ಮತ್ತು ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಮೂವತ್ತಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ಒಟ್ಟು 7 ಜಾತಿಯ 6 ಕೆಜಿ ಬೀಜಗಳನ್ನು ಬಿತ್ತಲಾಯಿತು.