ಸಿದ್ದಾಪುರ: ತಾಲೂಕಿನ ಕಿಬ್ಬಳ್ಳಿಯ ಶ್ರೀ ಮಹಾಗಣಪತಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಚುನಾವಣೆ ಪ್ರಕ್ರಿಯೆ ಹಾಗೂ ಮತದಾನದ ಬಗೆಗೆ ಅರಿವು,ಜಾಗೃತಿ ಮೂಡಿಸುವ ನಿಟ್ಟಿನಿಂದ ಶಾಲಾ ಮತದಾರರು ಸಾಕ್ಷರತಾ ಸಂಘದಡಿ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು. ಚುನಾವಣೆ ನಿಯಮಾನುಸಾರ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು.
ಮಕ್ಕಳಿಗೆ ಮತದಾನದ ಮಹತ್ವ ಹಾಗೂ ಚುನಾವಣಾ ಪ್ರಕ್ರಿಯೆಯ ಪ್ರಾಯೋಗಿಕ ಜ್ಞಾನ ಹೊಂದಲು ನಡೆಸಿದ ಈ ಚುನಾವಣೆ ಪ್ರಕ್ರಿಯೆಯಲ್ಲಿ ಶಾಲಾ ಮತದಾರ ಸಾಕ್ಷರತಾ ಸಂಘದ ಸಂಚಾಲಕ ಸಹ ಶಿಕ್ಷಕ ಶ್ರೀಧರ ಹೆಗಡೆ ಬಪ್ಪನಕೊಡ್ಲು, ಸಹ ಶಿಕ್ಷಕಿ ಶ್ರೀಮತಿ ಸುಮಿತ್ರಾ ಭಟ್, ಶ್ರೀಮತಿ ಅನಿತಾ ಸಿರ್ಸಿಕರ್ ಹಾಗೂ ಸಹ ಶಿಕ್ಷಕ ಶಿವಾನಂದ ಎಚ್.ಎಮ್ ಹಾಗೂ ಶಾಲೆಯ ಬೋಧಕೇತರ ಸಿಬ್ಬಂದಿ ಎಸ್. ಎನ್.ಭಟ್ ಇವರುಗಳು ಸಹಕರಿಸಿ ಕಾರ್ಯ ನಿರ್ವಹಿಸಿದರು. ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಜಿ.ವಿ.ಹೆಗಡೆಯವರು ಮುಖ್ಯ ಚುನಾವಣಾ ಆಯುಕ್ತರಾಗಿ ಮಾರ್ಗದರ್ಶನ ಮಾಡಿದರು.