ಶಿರಸಿ: ನಗರದ ಐದು ರಸ್ತೆ ಸರ್ಕಲ್ ಹತ್ತಿರ ಶ್ರದ್ದಾನಂದಗಲ್ಲಿಯಲ್ಲಿರುವ ಶ್ರೀ ಅಯ್ಯಪ್ಪ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಹೊಸದಾಗಿ ಇ ಸ್ಟಾಂಪಿಂಗ್ ಸೇವಾ ಕೇಂದ್ರವನ್ನು ಜೂ. ೧೪ರಂದು ಆರಂಭಿಸಲಾಯಿತು. ‘ಇ’ ಸ್ಟಾಂಪಿಂಗ್ ಸೇವಾ ಕೇಂದ್ರದ ಉದ್ಘಾಟನೆಯನ್ನು ಎಸ್. ಎಸ್. ಭಟ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಯ್ಯಪ್ಪ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ರಾಘವೇಂದ್ರ ಮಹೇಶ ಹೊನ್ನಾವರ ವಹಿಸಿದ್ದರು. ಸಹಕಾರಿಯ ಎಲ್ಲ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಹಕಾರಿಯ ಸದಸ್ಯರು ಮತ್ತು ಸಾರ್ವಜನಿಕರು ಬಾಂಡ್ ಪೇಪರ್ ಸೇವೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದರು.
‘ಇ’ ಸ್ಟಾಂಪಿಂಗ್ ಸೇವಾ ಕೇಂದ್ರದ ಉದ್ಘಾಟನೆ
