• Slide
    Slide
    Slide
    previous arrow
    next arrow
  • ದೇವಿಕೆರೆಯ ಉದ್ಯಾನವನಕ್ಕೆ ಅಭಿವೃದ್ಧಿ ಹರಿಕಾರ ದಿ.ವಸಂತ ಶೆಟ್ಟಿ ಹೆಸರಿಡಲು ಆಗ್ರಹ 

    300x250 AD

    ಶಿರಸಿ : ನಗರದ ದೇವಿಕೆರೆಯಲ್ಲಿ ನೂತನವಾಗಿ ನಿರ್ಮಾಣ ಆಗಿರುವ ಉದ್ಯಾನವನಕ್ಕೆ  ದೇವಿಕೆರೆಯ ಅಭಿವೃದ್ಧಿಗೆ ಮೂಲ ಕಾರಣೀಕರ್ತರಾದ ದಿ. ವಸಂತ ಸುಬ್ರಾಯ ಶೆಟ್ಟಿಯವರ ಹೆಸರನ್ನು ಇಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. 

    ದೇವಿಕೆರೆ ರಸ್ತೆ ಅಗಲೀಕರಣ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸಾರ್ವಜನಿಕರ ಸದುಪಯೊಗಕ್ಕೆ ದೊರೆಯುವಂತೆ ಮಾಡಿದ್ದ  ವಸಂತ ಶೆಟ್ಟಿ ಯವರ ಹೆಸರನ್ನು ಇಡುವ ಮೂಲಕ ಅವರ ಕೆಲಸ, ಸಾರ್ವಜನಿಕ ಸೇವೆ ನೆನಪಿನಲ್ಲಿ ಇರುವಂತೆ ಮಾಡಬೇಕು ಎಂದು ವಸಂತ ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ನಗರಸಭೆ ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಒತ್ತಾಯಿಸಿದ್ದಾರೆ. 

     ವಸಂತ ಶೆಟ್ಟಿ 1973 ರಿಂದಲೂ ದೇವಿಕೆರೆಯ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಶ್ರೀ ಭೂತೇಶ್ವರ ದೇವರ ಕೀರ್ತಿ ಕಲಶವನ್ನು ಉತ್ತುಂಗಕ್ಕೇರಿಸುವಲ್ಲಿ ಶ್ರಮಿಸುತ್ತ ಬಂದವರು ಎಂಬುದು ಸುತ್ತ ಊರಿಗೆ ಪ್ರಸಿದ್ದಿಯಾಗಿದೆ. ಪಾಳು ಬಿದ್ದಿದ್ದ ಕೆರೆಯನ್ನು ಹೂಳೆತ್ತಿ ಅದನ್ನು ಪುನರುಜೀವನಗೊಳಿಸುವತ್ತ ಅವರ ಕಾಳಜಿಯನ್ನು ಯಾರೂ ಮರೆಯುವಂತಿಲ್ಲ. ದೇವಿಕೆರೆಯ ಭೂತೇಶ್ವರನ ಹೆಸರಿನಲ್ಲಿಯೇ ದೇವಿಕೆರೆಯಲ್ಲಿ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ ಹಾಗೂ ಶ್ರೀ ಭೂತೇಶ್ವರ ಗ್ರಾಹಕರ ಸಹಕಾರಿ ಸಂಘವನ್ನೂ ಸ್ಥಾಪಿಸಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

    300x250 AD

    ಶಿರಸಿ ನಗರದ ಯಾವುದೇ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಾಗಿ ನಿಂತು ಎಂಥದೇ ಸಮಯದಲ್ಲಿ ಆದರೂ ಸಂಪನ್ನಗೊಳಿಸುವಲ್ಲಿ ಎತ್ತಿದ ಕೈಯಾಗಿದ್ದ  ವಸಂತ ಶೆಟ್ಟಿ ವ್ಯಕ್ತಿತ್ವವನ್ನು ಬಣ್ಣಿಸಲು ಸಾಧ್ಯವೇ ಇಲ್ಲ. ಮನರಂಜನೆ, ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಮೊದಲಾದ ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಅನುಭವ ಹೊಂದಿದ್ದ ಅವರು ಬ್ಯಾಂಕಿಂಗ ಕ್ಷೇತ್ರದಲ್ಲಂತೂ ಅಗಾಧ ಪರಿಣಿತಿಯನ್ನು ಗಳಿಸಿದ್ದರು. ಶಿರಸಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ಶ್ರೀಯುತರು ಆಗಾಗ ಸಂಭವಿಸುತ್ತಿದ್ದ ಸಾರ್ವಜನಿಕ ಸಮಸ್ಯೆಗಳು ಮತ್ತು ಗೊಂದಲಗಳಿಗೆ ತಕ್ಷಣವೇ ಪರಿಹಾರ ಸೂಚಿಸುವುದರ ಜೊತೆಗೆ ಸೌಹಾರ್ದತೆ ಕಾಪಾಡುವಲ್ಲಿ ಸದಾ ಮುಂದಿರುತ್ತಿದ್ದರು ಎಂದು ಸ್ಥಳೀಯರಾದ ಅರುಣ್ ಪ್ರಭು ಹೇಳಿದರು. 

    ವಿವಿಧ ಕ್ಷೇತ್ರಗಳ ಮಹನೀಯರುಗಳನ್ನು ಶಿರಸಿ ನಗರಕ್ಕೆ ಕರೆತಂದು ಪರಿಚಯಿಸುವುದರ ಜೊತೆಗೆ ಅವರ ಪ್ರಭಾವದಿಂದ ದೇವಿಕೆರೆಯನ್ನು ಸಂಪೂರ್ಣ ಅಭಿವೃದ್ಧಿಗೊಳಿಸಿ ನಗರದ ಸೌಂದರ್ಯಕ್ಕೆ ಮೆರಗು ತರುವಲ್ಲಿ  ವಸಂತ ಶೆಟ್ಟಿ ಪಾತ್ರ ಅನನ್ಯ, ಶಿರಸಿ ನಗರದ ಪ್ರಾತಃಸ್ಮರಣಿಯರಲ್ಲಿ ಮತ್ತು ಅಭಿವೃದ್ಧಿಯ ಹರಿಕಾರರಲ್ಲಿ ಇವರ ಹೆಸರು ಪ್ರಮುಖವಾಗಿರುವುದಲ್ಲದೇ ಅಜರಾಮರವಾಗಿದೆ. ದೇವಿಕರೆ ಎಂದರೆ ಭೂತೇಶ್ವರ ಕಟ್ಟೆ ಎಂಬಷ್ಟರ ಮಟ್ಟಿಗೆ ದಿ.ವಸಂತ ಶೆಟ್ಟಿ ಪ್ರಸಿದ್ದಿಗೆ ತಂದ ಈ ಪ್ರದೇಶವನ್ನು ಅವರ ಹೆಸರಿನಿಂದಲೇ ಕರೆದರೆ ಅವರ ಶ್ರಮ, ಮುಂಧೋರಣೆ ಮತ್ತು ಕೈಂಕರ್ಯಕ್ಕೆ ಸಾರ್ಥಕತೆ ನೀಡಿದಂತಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ರವಿ ಚಂದಾವರ ಆಗ್ರಹಿಸಿದರು. 

    Share This
    300x250 AD
    300x250 AD
    300x250 AD
    Leaderboard Ad
    Back to top