ಶಿರಸಿ: ಉ.ಕ ಜಿಲ್ಲಾ ಶಿಕ್ಷಕರ/ಕಿಯರ ನಿರಂತರ ಸಹಾಯವಾಣಿ (ರಿ.) ಸಂಸ್ಥೆಯ ವತಿಯಿಂದ 2021-2022 ನೇ ಸಾಲಿನಲ್ಲಿ SSLCಹಾಗೂ PUC ಪರೀಕ್ಷೆಯಲ್ಲಿ ಶೇಕಡಾ 85% ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ಪಾಸಾದ ಜಿಲ್ಲೆಯ ಆಟೋಚಾಲಕರ ಹಾಗೂ ಮಾಲಕರ ಪ್ರತಿಭಾವಂತ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಯನ್ನು ಕರೆಯಲಾಗಿದೆ.
ಪ್ರತಿಭಾ ಪುರಸ್ಕಾರವು ಸನ್ಮಾನ ಹಾಗೂ ನಗದು ಹಣವನ್ನು ಒಳಗೊಂಡಿದ್ದು ಜಿಲ್ಲೆಯ ಎಲ್ಲಾ ತಾಲೂಕಿನ ಆಟೋ ಚಾಲಕರ/ಮಾಲಕರ ಆಸಕ್ತ ಮಕ್ಕಳು ಅರ್ಜಿಗಳನ್ನು ಜೂ.25 ರ ಒಳಗಾಗಿ ಆಯಾ ತಾಲೂಕಿನ ಅಥವಾ ಜಿಲ್ಲಾ ಆಟೋ ಸಂಘದ ಮೂಲಕ ಅರ್ಜಿಗಳನ್ನು ಸಂಸ್ಥೆಯ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರವನ್ನು ಪಡೆಯಲು ವಿದ್ಯಾರ್ಥಿಗಳ ಕೈ ಬರಹದ ಅರ್ಜಿಯ ಜೊತೆಗೆ ದೃಢೀಕರಿಸಿದ ಅಂಕಪಟ್ಟಿ, ಆಧಾರ ಕಾರ್ಡ, ಬ್ಯಾಂಕ ಪಾಸ್ ಬುಕ್, ರೇಶನ್ ಕಾರ್ಡ ಮತ್ತು ಪಾಲಕರ ಡ್ರೈವಿಂಗ್ ಲೈಸನ್ಸ್ ಪ್ರತಿಗಳನ್ನು ಕಳುಹಿಸಿಕೊಡಲು ಕೋರಿದೆ.
ಅರ್ಜಿಗಳನ್ನು ಕಳುಹಿಸಿಕೊಡಬೇಕಾದ ವಿಳಾಸ:
ವಿಶ್ವನಾಥ ಎಸ್ ಗೌಡ
ಅಧ್ಯಕ್ಷರು,
ಉ.ಕ ಜಿಲ್ಲಾ ಶಿಕ್ಷಕರ/ಕಿಯರ ನಿರಂತರ ಸಹಾಯವಾಣಿ ರಿ.
ಮುರೇಸರ, ಚಿಪಗಿ, ತಾ : ಶಿರಸಿ (ಉತ್ತರ ಕನ್ನಡ ) 581402
ಮೋ : 9880179177