ಸಿದ್ದಾಪುರ: ಇತ್ತೀಚಿಗೆ ಕೇರಳದ ತಿರುವನಂತಪುರದಲ್ಲಿ ನಡೆದ 17ನೇ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ತಾಲೂಕಿನ ಐಡಿಯಲ್ ಪ್ಲೇ ಅಬಾಕಸ್ ಸೆಂಟರ್ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಿದ್ದಾರೆ.
ಸ್ಥಳೀಯ ಸೆಂಟರ್‍ನಿಂದ 10 ಮಕ್ಕಳು ಭಾಗವಹಿಸಿದ್ದರು. ವೇದಾಂತ್ ಆರ್.ಭಟ್, ಭರತ್.ಬಿ.ಪಟೇಲ್ ಪ್ರಥಮ ಸ್ಥಾನ, ತನ್ಮಯ ಎಂ.ವಿ. ದ್ವಿತೀಯ, ಸುಚೇತ್ ಸಿ.ಎಚ್., ಸಂಕೇತ್ ಆರ್.ಹೆಗಡೆ ತೃತೀಯ, ಲಿಖಿತ್ ಆರ್., ಹರ್ಷಿತಾ ಎಸ್.ಪಟಗಾರ ನಾಲ್ಕನೇ ಸ್ಥಾನ, ಮನೀಷ ಆರ್.ಭಟ್, ಪ್ರಣವ್ ಎಂ.ಭಟ್ ಐದನೇ ಸ್ಥಾನ, ಸಮರ್ಥ ಆರ್.ಹೆಗಡೆ ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ. ಸಿದ್ದಾಪುರ ಸೆಂಟರ್‍ನ ಫ್ರಾಂಚೈಸಿ ಗುರುಮೂರ್ತಿ ಆರ್.ಎನ್., ವಿನೋದಾ ಈ.ಎನ್. ಹಾಗೂ ಪಾಲಕರು ಬಹುಮಾನ ವಿಜೇತ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.