ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ತೊಂದರೆಗಳ ಪರಿಶೀಲನೆಗೆ ಕಾಂಗ್ರೆಸ್ ನಿಂದ ಸಮಿತಿ ರಚಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮಿತಿ ರಚಿಸಿ ಆದೇಶ ಹೊರಡಿಸಿದ್ದು ನೆರೆಯಿಂದಾಗಿ ಉಂಟಾದ ಸಾರ್ವಜನಿಕರ ಆಸ್ತಿ ನಷ್ಟ, ತೊಂದರೆಗಳು ಜನತೆ ಅನುಭವಿಸುತ್ತಿರುವ ಸಂಕಷ್ಟಗಳನ್ನು ಗಮನಿಸಿ ಪರಿಹಾರೋಪಾಯಗಳನ್ನು ಸಮಿತಿ ಸೂಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು ಉತ್ತರಕನ್ನಡದಲ್ಲಿ ಮಾಜಿಸಚಿವ ಹಾಗೂ ಹಾಲಿಶಾಸಕ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸಮಿತಿ ಕಾರ್ಯ ನಿರ್ವಹಿಸಲಿದೆ.
ಸಮಿತಿಯಲ್ಲಿ ಸದಸ್ಯರಾಗಿ ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಎಸ್.ಎಲ್.ಘೋಟ್ನೇಕರ್, ಮಾಜಿ ಶಾಸಕರಾದ ಸತೀಶ್ ಸೈಲ್, ಮಂಕಾಳ ವೈದ್ಯ, ಶಾರದಾ ಶೆಟ್ಟಿ ಹಾಗೂ ಮುಖಂಡರಾದ ಪ್ರಶಾಂತ್ ದೇಶಪಾಂಡೆ ಕಾಂಗ್ರೆಸ್ ಉಸ್ತುವಾರಿ ಸುಷ್ಮಾ ರಾಜಗೋಪಾಲ್, ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣಾ ನಾಯ್ಕ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.