ಹೊನ್ನಾವರ: ಪ್ರಧಾನಿ ನರೇಂದ್ರ ಮೋದಿಯವರ ಎಂಟು ವರ್ಷದ ಆಡಳಿತದ ಸೇವೆ ಹಾಗೂ ಬಡವರ ಕಲ್ಯಾಣದಡಿಯ ಯುವಸಂಪರ್ಕ ಅಭಿಯಾನದ ಅಂಗವಾಗಿ ತಾಲೂಕಿನ ಬಿಜೆಪಿ ಯುವಮೋರ್ಚಾದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಯುವಸಾಧಕರನ್ನು ಸನ್ಮಾನಿಸಲಾಯಿತು.
ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ದೀಪಕ್ ಶೇಟ್ ಚಿತ್ತಾರ, ಸಂಗೀತ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಸಂಗೀತಾ ನಾಯ್ಕ, ರಂಗಭೂಮಿ ಕ್ಷೇತ್ರದ ಸಾಧಕ ಎಂ.ಎಚ್.ಗಣೇಶ, ಸಂಸ್ಕøತ ಸಾಹಿತ್ಯ ಸಾಧಕ ಗಜಾನನ ಭಟ್ ಕರ್ಕಿ, ಪ್ರಗತಿ ಪರ ಕೃಷಿಕರಾದ ವಿನಯ ಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಯುವಮೋರ್ಚಾ ಅಧ್ಯಕ್ಷ ಸಚಿನ್ ಶೇಟ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಯ್ಕ, ತಾಲೂಕಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ, ಕೇಶವ ಗೌಡ ಹಾಗೂ ಯುವಮೋರ್ಚಾ ಪದಾಧಿಕಾರಿಗಳಾದ ನೂತನ ನಾಯ್ಕ, ಸಂದೇಶ ನಾಯ್ಕ, ವೇಣುಗೋಪಾಲ ನಾಯ್ಕ, ಶಿವಾನಂದ ಮರಾಠಿ, ರಮೇಶ್ ನಾಯ್ಕ, ಮಂಜು ಗೌಡ ಹಾಗೂ ಸದಸ್ಯರುಗಳು ಇದ್ದರು.