
ಶಿರಸಿ: ದಿವಂಗತ ಶ್ರೀಪಾದ ಹೆಗಡೆ ಕಡವೆಯವರ 26 ನೇ ಸಂಸ್ಮರಣಾ ದಿನದ ಅಂಗವಾಗಿ ಟಿ.ಎಸ್ ಎಸ್ ಹಾಗೂ ಎಸ್ ಆರ್ ಕಡವೆ ಅಭ್ಯುದಯ ಸಂಸ್ಥೆ ಶಿರಸಿ ವತಿಯಿಂದ ಹೆಗಡೆಕಟ್ಟಾ ಪಂಚಲಿಂಗದ ಶ್ರೀಪಾದ ಭಟ್ಟ ದಂಪತಿಗಳಿಗೆ ಸನ್ಮಾನ ಹಾಗೂ ಅಂಗನವಾಡಿ ಮಕ್ಕಳಿಗೆ ಸ್ಟೀಮರ್ ವಿತರಿಸಲಾಯಿತು.
ಹೆಗಡೆಕಟ್ಟಾ ಪಂಚಲಿಂಗದಲ್ಲಿ ಸನ್ಮಾನ ಸ್ವೀಕರಿಸಿದ ಶ್ರೀಪಾದ ಭಟ್ಟ ಅವರು ಸಿಡಿಪಿಒ ದತ್ತಾತ್ರಯ ಭಟ್ ಅವರಿಗೆ ಸ್ಟೀಮರ್ ಹಸ್ತಾಂತರಿಸುವ ಮೂಲಕ ಕಾರ್ಯಕ್ಕೆ ಚಾಲನೆ ನೀಡಿದರು.
ಹಾಗೂ ಅಂಗನವಾಡಿ ಶಿಕ್ಷಕಿಯರಿಗೆ ಸ್ಟೀಮರ್ ವಿತರಣೆ ಕಾರ್ಯವನ್ನು ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ವ್ಯವಸ್ಥಾಪಕ ರವೀಶ್ ಹೆಗಡೆ, ಎಸ್.ಕೆ ಭಾಗ್ವತ್, ಶ್ರೀಪಾದ ಹೆಗಡೆ ಕಡವೆ, ಶಶಾಂಕ ಹೆಗಡೆ ಶೀಗೆಹಳ್ಳಿ ನೆರವೇರಿಸಿದರು.
ಮುಖಂಡರಾದ ದೀಪಕ ಹೆಗಡೆ ದೊಡ್ಡೂರು, ಪ್ರವೀಣ ಪಾಟೀಲ್ ತೆಪ್ಪಾರ್, ಶ್ರೀಧರ ಹೆಗಡೆ, ಕುಮಾರ ಜೋಷಿ, ವಿನಾಯಕ ಭಟ್ಟ ಹಾಗೂ ಸ್ಥಳಿಯ ಪ್ರಮುಖರು ಉಪಸ್ಥಿತರಿದ್ದರು