ಶಿರಸಿ: ಸೋಂದಾ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ಪತಿ ಸ್ವಾಮಿಗಳ ಅನುಮತಿ ಮೇರೆಗೆ ಇಲ್ಲಿನ ಯೋಗಮಂದಿರದಲ್ಲಿ ಜೂನ್ 15ರಿಂದ 21ರವರೆಗೆ ಯೋಗ ಶಿಬಿರ ಪ್ರತಿದಿನ ಬೆಳಿಗ್ಗೆ 6ರಿಂದ 7ರವರೆಗೆ ಶಿಬಿರ ಸಪ್ತಾಹ ನಡೆಯಲಿದೆ.
ಯೋಗಾಚಾರ್ಯ ರಘುರಾಮ ಹೆಗಡೆ ಯೋಗಾಭ್ಯಾಸದ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದಾರೆ. ಜೂ.19ರಂದು ಬೆಳಿಗ್ಗೆ 6ರಿಂದ 7ರವರೆಗೆ ಯೋಗಾಚಾರ್ಯ ಶ್ರೀಶಂಕರ ನಾರಾಯಣ ಶಾಸ್ತ್ರಿಗಳವರು ಯೋಗ ತರಬೇತಿ ನಡೆಸಿಕೊಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ಅಪೇಕ್ಷಿಸಿದೆ. ಯೋಗಾಭ್ಯಾಸ ಮಾಡುತ್ತ ವಿಶ್ವಯೋಗ ದಿನವನ್ನು ಆಚರಿಸುವುದರೊಂದಿಗೆ ರೋಗ ಮುಕ್ತರಾಗಲು ಆಸಕ್ತಿ ವಹಿಸಿ ಪಾಲ್ಗೊಳ್ಳಬೇಕೆಂದು ಯೋಗ ಮಂದಿರದ ಪ್ರಕಟಣೆ ತಿಳಿಸಿದೆ.