ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ,ಮಠದೇವಳ ಗ್ರಾಮದಲ್ಲಿರುವ ಶ್ರೀ ಶಂಕರ-ನಾರಾಯಣ ದೇಗುಲದಲ್ಲಿ ಜೂ.13 ರ ಮಧ್ಯಾಹ್ನ 3.30 ರಿಂದ 6 ಘಂಟೆಯವರೆಗೆ ವಿವಿಧ ಜಾತಿಯ ಪುಷ್ಪ ಗಿಡಗಳನ್ನು ನೆಡಲಾಯಿತು.
ಸುಮಾರು 500ವರ್ಷಗಳ ಹಿಂದೆ ಸೋದೆ ಅರಸರ ಕಾಲದಲ್ಲಿ ಕಲ್ಲಿನಿಂದ ಕಟ್ಟಲ್ಪಟ್ಟ ಈ ಬೃಹತ್ ದೇಗುಲದ ಸುತ್ತಮುತ್ತ 60ಕ್ಕೂ ಅಧಿಕ , ಬೇರೆ ಬೇರೆ ಕಾಲದಲ್ಲಿ ಹೂ ಬಿಡುವ ಉತ್ತಮ ಸಸ್ಯಗಳನ್ನು ಆಯ್ದು ತಂದು, ಪುಷ್ಪ ಸಸ್ಯಾರೋಪಣ ಕಾರ್ಯಕ್ರಮ ನಡೆಸಲಾಯಿತು.
ಇದರಲ್ಲಿ ಸೋಂದಾ ಜಾಗೃತ ವೇದಿಕೆಯ ಪದಾಧಿಕಾರಿಗಳು,ಹಳೇಯೂರು ಶ್ರೀ ಶಂಕರ-ನಾರಾಯಣ ಸ್ವ ಸಹಾಯ ಸಂಘದ ಸದಸ್ಯರು, ಹಾಗೂ ಸುಧಾಪುರ ಕ್ಷೇತ್ರದ ನಾಗರೀಕ ಬಂಧು ಭಗಿನೀಯರು ಉಪಸ್ಥಿತರಿದ್ದರು.
ಶ್ರೀ ಶಂಕರ-ನಾರಾಯಣ ದೇಗುಲದಲ್ಲಿ ಪುಷ್ಪ ಸಸ್ಯಾರೋಪಣ
