• Slide
    Slide
    Slide
    previous arrow
    next arrow
  • ಬೀಡಾಡಿ ದನಗಳ ಹಾವಳಿ: ವಾಹನ ಸಂಚಾರಕ್ಕೆ ತೀವ್ರ ತೊಂದರೆ

    300x250 AD

    ದಾಂಡೇಲಿ: ಪ್ರವಾಸೋದ್ಯಮ ನಗರವಾಗಿ ಶರವೇಗದಲ್ಲಿ ಬೆಳೆಯುತ್ತಿರುವ ನಗರದಲ್ಲಿ ಬಿಡಾಡಿ ದನ- ಕರುಗಳ ಸಂಖ್ಯೆಯು ಅಷ್ಟೇ ವೇಗವಾಗಿ ಹೆಚ್ಚಾಗತೊಡಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿಯೇ ಆಹಾರವನ್ನರಸಿ ಬಿಡಾಡಿ ದನ- ಕರುಗಳು ಓಡಾಡುತ್ತಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

    ನಗರದ ಜೆ.ಎನ್.ರಸ್ತೆಯ ಒಂದು ಬದಿಯಲ್ಲಿ ಸಂಡೆ ಮಾರ್ಕೆಟ್ ಇರುವುದರಿಂದ ಇಲ್ಲಿ ಹಾಗೂ ಇದರ ಸಮೀಪ ಆಹಾರವನ್ನರಸಿ ಬಿಡಾಡಿ ದನ- ಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದೆ. ಅತೀ ಹೆಚ್ಚು ವಾಹನ ಹಾಗೂ ಜನರ ಓಡಾಟವಿರುವ ಜೆ.ಎನ್.ರಸ್ತೆಯಲ್ಲೆ ಬಿಡಾಡಿ ದನ- ಕರುಗಳು ಹೆಚ್ಚಾನುಹೆಚ್ಚು ಓಡಾಡುತ್ತಿದ್ದು, ವಾಹನ ಸವಾರರು ಜೀವ ಭಯದಿಂದಲೆ ಸಂಚರಿಸಬೇಕಾದ ಅನಿವಾರ್ಯತೆಯಿದೆ. ಬಹಳಷ್ಟು ಬಾರಿ ಅಪಘಾತಗಳು ಸಂಭವಿಸಿ, ದ್ವಿಚಕ್ರ ವಾಹನ ಸವಾರರು ಗಾಯ ಮಾಡಿಕೊಂಡಿರುವ ಉದಾಹರಣೆಗಳಿವೆ. ಇದರ ಜೊತೆ ಅಪಘಾತಕ್ಕೀಡಾಗಿ ಬಿಡಾಡಿ ದನ- ಕರುಗಳು ಗಾಯಗೊಂಡಿರುವುದು ಮಾತ್ರವಲ್ಲದೇ ಮೃತಪಟ್ಟಿರುವ ದುರ್ಘಟನೆಯು ನಡೆದಿದೆ. ಬಿಡಾಡಿ ದನ- ಕರುಗಳ ನಿಯಂತ್ರಣಕ್ಕೆ ನಗರಸಭೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top