ಹೊನ್ನಾವರ: ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಪಟ್ಟಣದ ಪ್ರಭಾತನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.
ಕೋವಿಡ್ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಮಾಸ್ಕ್ ಸ್ಯಾನಿಟೈಜರ್ ಮೂಲಕ ಮತದಾರರನ್ನು ಮತದಾನದ ಕೊಠಡಿಗೆ ಕಳುಹಿಸುವ ಕಾಯಕದಲ್ಲಿ ಚುನಾವಣಾ ಸಿಬ್ಬಂದಿ ನಿರತರಾಗಿದ್ದರು. ಮತದಾನ ಕೇಂದ್ರದ 200 ಮೀಟರ್ ಪ್ರದೇಶದವರೆಗೂ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿತ್ತು. ಮತದಾನ ಕೇಂದ್ರದ ಹೊರಗಡೆ ಕಾಂಗ್ರೆಸ್- ಬಿಜೆಪಿ- ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಯು ಗೆಲ್ಲುವ ವಿಶ್ವಾಸದಲ್ಲಿಯೇ ಮತದಾರರಿಗೆ ಕೊನೆಯ ಹಂತದ ಮನವೊಲಿಕೆಯಲ್ಲಿ ತೊಡಗಿದ್ದರು.
ಮುಂಜಾನೆಯಿಂದ ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ಬಳಿಕ ತುಸು ಏರಿಕೆ ಕಂಡಿತು. ತಾಲೂಕಿನಲ್ಲಿ 360 ಮತದಾರರಿದ್ದು, 303 ಮತಗಳು ಚಲಾವಣೆಯಾಗುವ ಮೂಲಕ 84.16% ಮತದಾನವಾಗಿದೆ. ಮತದಾನ ಶಾಂತಿಯುತವಾಗಿದ್ದು, ಶಾಸಕ ದಿನಕರ ಶೆಟ್ಟಿ ಸೇರಿದಂತೆ ವಿವಿಧ ಪಕ್ಷದ ನಾಯಕರು, ಮುಖಂಡರು ಕಾರ್ಯಕರ್ತರು ಆಗಮಿಸಿ ಮಾಹಿತಿ ಮತದಾನದ ಮಾಹಿತಿ ಪಡೆದರು.
ಕೋಟ್…
14 ಮಂಡಲದ 15 ಮತಗಟ್ಟೆಯಲ್ಲಿ ಪಕ್ಷದ ಕಾರ್ಯಕರ್ತರು, ಶಿಕ್ಷಕರು ಮತದಾನ ಮಾಡುವ ವೇಳೆ ಹಾಜರಿದ್ದರು. ಕಳೆದ 7 ಅವಧಿಯ 42 ವರ್ಷದಿಂದ ಪ್ರತಿನಿಧಿಸಿದ್ದ ಬಸವರಾಜ ಹೊರಟ್ಟಿಯವರು ಪಕ್ಷದ ಬೆಂಬಲದಿAದ ಸ್ವರ್ಧಾ ಕಣದಲ್ಲಿದ್ದಾರೆ. ಇಷ್ಟು ವರ್ಷ ಬಿಜೆಪಿ ಹಾಗೂ ಹೊರಟ್ಟಿ ನಡುವಿನ ಪೈಪೋಟಿಯಾಗಿತ್ತು. ಆದರೆ ಈ ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಆಡಳಿತ ಮನಗಂಡು ಬಿಜೆಪಿ ಸೇರ್ಪಡೆಯಾದ ಹಿನ್ನಲೆ ಬಿಜೆಪಿಯೊಡನೆ ಹೊರಟ್ಟಿ ಇರುವುದರಿಂದ, ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿರುವುದರಿಂದ ಐತಿಹಾಸಿಕ ಗೆಲುವು ಸಾಧಿಸಲಿದ್ದಾರೆ.– ವೆಂಕಟೇಶ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ
ಹೊರಟ್ಟಿಯವರು ಈ ಬಾರಿ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇಷ್ಟು ಅವಧಿಯು ಜೆಡಿಎಸ್ ಅಭ್ಯರ್ಥಿ ವಿಜಯಶಾಲಿಯಾಗಿದ್ದು, ಈ ಬಾರಿಯು ನಮ್ಮ ಪಕ್ಷದ ಅಭ್ಯರ್ಥಿಯೆ ಜಯ ಗಳಿಸಲಿದ್ದಾರೆ. ಹುಬ್ಬಳ್ಳಿ- ಧಾರವಾಡ ಭಾಗದಲ್ಲಿ ಅತ್ಯಧಿಕ ಮತದಾರರಿದ್ದು, ಫಲಿತಾಂಶದ ಬಳಿಕ ಹೊರಟ್ಟಿಯವರು ಲಾಬ ನಷ್ಟದ ಲೆಕ್ಕಚಾರ ತಿಳಿಯಲಿದೆ. ಅಭ್ಯರ್ಥಿಯ ಬದಲಾವಣೆಯನ್ನು ಶಿಕ್ಷಕರು ಬಯಸಿದ್ದಾರೆ.– ಗಣಪಯ್ಯ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ
40 ವರ್ಷದಿಂದ ಶಿಕ್ಷಕರ ಸಮಸ್ಯೆಗೆ ಹೋರಾಡಿದವರು ಇಂದು ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿದ್ದು, 4 ಜಿಲ್ಲೆಯಲ್ಲಿಯೂ ಮತದಾರರು ಆಶೀರ್ವಾದ ಮಾಡಲಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಪಕ್ಷದ ಜಿಲ್ಲಾ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ ಸೇರಿದಂತೆ ಪಕ್ಷದ ಪದಾಧಿಕಾರಿಗಳ ಪ್ರಚಾರ ಫಲ ನೀಡಲಿದೆ.– ಜಗದೀಪ ತೆಂಗೇರಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ