
ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ಕಳೆದ ಒಂದು ವಾರದ ಹಿಂದೆ ಕಂಬಾರಗಟ್ಟಿ ಪ್ಲಾಟ್ ನಿವಾಸಿ ವಿಜಯ ಇಳಿಗೇರ್ ಎಂಬ ಯುವಕನ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣವನ್ನು ಬೇಧಿಸಿದ ಪೆÇಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿತರನ್ನು ಪಟ್ಟಣದ ಆನಂದ ನಗರದ ನಿವಾಸಿ ಸಂಜಯ್ ಹಾಗೂ ಶಿಗ್ಗಾಂವ ತಾಲೂಕಿನ ಮುದ್ದಿನಕೊಪ್ಪ ಗ್ರಾಮದ ಶ್ರೀನಿವಾಸ ಬಂಧಿತರಾಗಿದ್ದಾರೆ.
ಕೊಲೆಯಾದ ವ್ಯಕ್ತಿ ಹಾಗೂ ಬಂಧಿತರಿಬ್ಬರು ಮೂವರು ಬಹಳದಿನದಿಂದ ಗೆಳೆತನವಿದ್ದು ಕಳೆದ 4-5 ತಿಂಗಳಿನಿಂದ ಬಂಧಿತ ಆರೋಪಿ ಸಂಜಯ್ ಹಾಗೂ ಕೊಲೆಯಾದ ವಿಜಯ ನಡುವೆ ಜಗಳಗಳು ಆಗಿದ್ದವು. ಕೊಲೆಯಾದ ವ್ಯಕ್ತಿಯನ್ನು ಈ ಮೊದಲೇ ಎರಡು ಸಾರಿ ಕೊಲೆ ಮಾಡುವ ಉದ್ದೇಶದಿಂದ ಹೋದರು. ಕೊಲೆ ಮಾಡಲು ಸಾಧ್ಯವಾಗದೆ ಇದ್ದಾಗ ಆರೋಪಿತನು ಯಾಕೆ ಜಗಳ ಮಾಡುವುದು ಎಂದು ಸುಮ್ಮನೆ ಇದ್ದಾನೆ. ಕೊಲೆ ಮಾಡಿದ ದಿನದಿಂದ ಮೊದಲು ಮೂರು ದಿನಗಳಿಂದ ಮೂವರು ಸೇರಿಕೊಂಡಿದ್ದರು ಎನ್ನಲಾಗಿದೆ. ವಿಜಯ್ ಕೊಲೆಯಾದ ದಿನ ಆರೋಪಿಗಳಿಬ್ಬರು ಹಾಗೂ ಕೊಲೆಯಾದ ವಿಜಯ ಹಾಗು ಪಟ್ಟಣದ ಇಬ್ಬರು ಯುವಕರು ಸೇರಿಕೊಂಡು ಪಟ್ಟಣದ ಹೊಟೇಲನಲ್ಲಿ ಪಾರ್ಟಿ ಮಾಡಿದ್ದಾರೆ. ನಂತರ ಪಟ್ಟಣದ ಇಬ್ಬರು ಯುವಕರು ಮನೆಗೆ ಹೋಗಿದ್ದಾರೆ. ಆರೋಪಿಗಳಿಬ್ಬರು ಹಾಗೂ ವಿಜಯ್ ಸೇರಿಕೊಂಡು ನ್ಯಾಸರ್ಗಿ ರಸ್ತೆಯಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ಸಾರಾಯಿ ಕುಡಿದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಆರೋಪಿಗಳಿಬ್ಬರು ಸೇರಿ ಕೊಲೆ ಮಾಡಿರುವುದಾಗಿ ಪೆÇಲೀಸ್ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾರೆ ಕೊಲೆ ನಡೆದು ವಾರ ಕಳೆಯುವುದರೊಳಗೆ ಪ್ರಕರಣ ಬೇಧಿಸಿದ ಮುಂಡಗೋಡ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲಾ ಎಸ್.ಪಿ ಶಿವಪ್ರಕಾಶ ದೇವರಾಜು, ಎಡಿಶನಲ್ ಎಸ್.ಪಿ ಬದರಿನಾಥ, ಶಿರಸಿ ಡಿಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಪ್ರಭುಗೌಡ ಡಿ.ಕೆ. ಹಾಗೂ ತಂಡದಿಂದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.