ಶಿರಸಿ:ಮುಂದಿನ ದಿನಗಳಲ್ಲಿ ಪೂಜ್ಯರ ಆಶಯಗಳನ್ನು ಅನುಷ್ಠಾನ ಮಾಡುವ ಕಾರ್ಯದಲ್ಲಿ ಎಲ್ಲರೂ ಸಹಕರಿಸಿ ಸ್ವಾಸ್ತ್ಯ ಸಮಾಜ ನಿರ್ಮಿಸುವಂತಾಗಲಿ ಎಂದು ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯ ಉಪೇಂದ್ರ ಪೈ ಹೇಳಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಜಿಲ್ಲಾ ಜನಜಾಗೃತಿ ವೇದಿಕೆಯ ತ್ರೈಮಾಸಿಕ ಸಭೆ ಸೊರಬ ಯೋಜನಾ ಕಛೇರಿಯಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಜಿಲ್ಲಾ ಅಧ್ಯಕ್ಷ ಸುಭಾಷ ನಾಯ್ಕ ಕಾನಸೂರ ಉದ್ಘಾಟಿಸಿದರು.ಕಾರ್ಯಕ್ರಮದ ಕುರಿತು ಉಪೇಂದ್ರ ಪೈ ಮಾತನಾಡಿ, ಪೂಜ್ಯರ ಮಾರ್ಗದರ್ಶನದಲ್ಲಿ ನಡೆಯುವ ಈ ಪುಣ್ಯದ ಕಾರ್ಯಕ್ರಮದಲ್ಲಿ ನಿರಂತರ ಸೇವೆ ಸಲ್ಲಿಸುವ ಮೂಲಕ ಸಮಾಜಸೇವೆ ಮಾಡುವ ಭಾಗ್ಯ ದೊರಕಿರುವುದು ತುಂಬಾ ಸಂತೋಷ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪರಮಪೂಜ್ಯ ಡಾ.ವೀರೇಂದ್ರ ಹೆಗ್ಗಡೆರವರ ಮಾರ್ಗದರ್ಶನದಲ್ಲಿ ವೇದಿಕೆ ಮೂಲಕ ಈ ವರ್ಷ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ, ವೇದಿಕೆ ಮೂಲಕ ನೆಡೆಯುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮದ್ಯವರ್ಜನ ಶಿಬಿರ, ಪರಿಸರ ಸ್ವಚ್ಛತೆ, ರಕ್ಷಣೆ ಹಾಗೂ ವಿಶ್ವ ತಂಬಾಕು ವಿರೋಧಿ ದಿನಾಚರಣೆ, ಧೂಮಪಾನ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಕುರಿತು ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಕಾಳಿಂಗರಾಜ್ ಎಂ.ಎಸ್., ಸದಸ್ಯರಾದ ಸುಧಶಿ ವಪ್ರಕಾಶ್, ಗೌರಿ ನಾಯ್ಕ, ಕಸ್ತೂರಿ ನಾಗರಾಜ, ದೇವರಾಜ್, ದಿನಕರ್ ಭಟ್, ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯರು, ಎಲ್ಲಾ ತಾಲ್ಲೂಕಿನ ಯೋಜನಾಧಿಕಾರಿಗಳು ಇದ್ದರು.