ಯಲ್ಲಾಪುರ: ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮದೇ ವ್ಯಕ್ತಿತ್ವವನ್ನು ದಾಖಲಿಸಿದ ದಿವಂಗತ ವಿ.ಎಸ್.ಭಟ್ಟ ಅಬ್ಬಿತೋಟರವರು ಕಾರ್ಯ ಕ್ಷಮತೆಯಿಂದ ಹೆಸರಾಗಿದ್ದಾರೆ. ತಮ್ಮ ಶಿಕ್ಷಕ ವೃತ್ತಿ ಯ ಜೊತೆಗೆ ವಿವಿಧ ಸಂಘಟನೆಯಲ್ಲೂ ಕ್ರಿಯಾಶೀಲವಾಗಿ ತೊಡಗಿಸಿಕೊಂಡ ವ್ಯಕ್ತಿಯಾಗಿದ್ದರು. ಇನ್ನೂ ಸೇವೆಯಲ್ಲಿರುವಾಗಲೇ ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡ ಬಗೆಗೆ ವೇದನೆಯಿದೆ. ಎಂದು ಜಿ.ಎನ್ ಕೋಮಾರ ಹೇಳದರು.
ಅವರು ತಾಲ್ಲೂಕಿನ ವಜ್ರಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಗಲಿದ ಶಿಕ್ಷಕ ವಿ ಎಸ್ ಭಟ್ಟ ಅಬ್ಬಿತೋಟ ರವರ ನುಡಿ ನಮನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
ನುಡಿ ನಮನದಲ್ಲಿ ಶಿಕ್ಷಕಿ ರಾಧಾ ಭಟ್ಟ ಪ್ರಾಸ್ತಾವಿಕ ಮಾತನಾಡಿ ವಿ.ಎಸ್ ಭಟ್ಟರವರು ಕೇವಲ ವ್ಯಕ್ತಿಯಾಗಿರದೇ ಎಲ್ಲರ ಪಾಲಿನ ಶಕ್ತಿಯಾಗಿದ್ದರು. ಸದಾಕಾಲ ಮಾರ್ಗದರ್ಶಕರಾಗಿ ಎಲ್ಲರೊಂದಿಗೆ ಸಂಹವನಗೊಳ್ಳುತ್ತಿದ್ದರು. ಎಂದರು. ಅವರ ಒಡನಾಟ ವನ್ನು ಶಿಕ್ಷಕರಾದ ಎಮ್ ವಿ ಭಟ್ಟ ಗಿಡಗಾರಿ, ಭಾಸ್ಕರ ಭಟ್ಟ, ನಾಗರಾಜ ಹೆಗಡೆ,ಪ್ರತಿಮಾ ಕೋಮಾರ,ಶಿವರಾಮ ಕೋಮಾರ, ಸವಿತಾ ಜಿ ಎಸ್ ನೆನಪಿಸಿಕೊಂಡರು.
ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಕಾಮೇಶ್ವರ ಭಟ್ಟ ಅಧ್ಯಕ್ಷತೆವಹಿಸಿದ್ದರು. ನುಡಿನಮನದಲ್ಲಿ ಅನೇಕ ಶಿಕ್ಷಕರು ,ಸಾರ್ವಜನಿಕರು ಭಾಗವಹಿಸಿದ್ದರು. ಮುಖ್ಯಾಧ್ಯಾಪಕಿ ಇಂದಿರಾ ಕೋಮಾರ ವಂದಿಸಿದರು.