ಸಿದ್ದಾಪುರ:ತಾಲೂಕಿನ ನಾಣಿಕಟ್ಟಾ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ನಟರಾಜ್ ಎಂ.ಹೆಗಡೆ ಮತ್ತು ಗೆಳೆಯರ ಬಳಗ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ಜೂ.15ರಂದು ಸಂಜೆ 6.30ರಿಂದ ಯಕ್ಷಗಾನ ಹಿಮ್ಮೇಳ ವೈಭವ ನಡೆಯಲಿದೆ.
ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು,ಕು.ಶ್ರೀರಕ್ಷಾ ಹೆಗಡೆ ಸಿದ್ದಾಪುರ. ಮದ್ದಲೆಯಲ್ಲಿ ಶಂಕರ ಭಾಗವತ್ ಯಲ್ಲಾಪುರ ಹಾಗೂ ಎನ್.ಜಿ.ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸನ್ನ ಭಟ್ಟ ಹೆಗ್ಗಾರ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಜೂ.15ಕ್ಕೆ ನಾಣಿಕಟ್ಟಾದಲ್ಲಿ ‘ಯಕ್ಷಗಾನ ಹಿಮ್ಮೇಳ ವೈಭವ’
