ಶಿರಸಿ: ಪರಮ ಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ಪತಿ ಸ್ವಾಮಿಗಳವರು ಸ್ವರ್ಣವಲ್ಲೀ ಅವರ ಅನುಮತಿ ಮೇರೆಗೆ ಯೋಗಮಂದಿರ ಶಿರಸಿಯಲ್ಲಿ ಜೂನ 15 ರಿಂದ ಜೂನ 21 ರವರೆಗೆ ಯೋಗ ಶಿಬಿರ ಪ್ರತಿ ದಿನ ಬೆಳಿಗ್ಗೆ 6 ಘಂಟೆಯಿಂದ 7 ಘಂಟೆಯವರೆಗೆ ಶಿಬಿರ ಸಪ್ತಾಹ ನಡೆಯಲಿದೆ.
ಯೋಗಾಚಾರ್ಯ ರಘುರಾಮ ಹೆಗಡೆಯವರು ಯೋಗಾಭ್ಯಾಸದ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದಾರೆ.ಜೂ. 19 ರವಿವಾರದಂದು ಬೆಳಿಗ್ಗೆ 6 ಘಂಟೆಯಿಂದ 7 ಘಂಟೆಯವರೆಗೆ ಯೋಗಾಚಾರ್ಯ ಶಂಕರ ನಾರಾಯಣ ಶಾಸ್ತ್ರಿಗಳವರು ಯೋಗ ಕ್ಲಾಸ್ ನಡೆಸಿಕೊಡಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ಅಪೇಕ್ಷಿಸಿದೆ. ಯೋಗಾಭ್ಯಾಸ ಮಾಡುತ್ತ ವಿಶ್ವಯೋಗ ದಿನಾಚರಣೆಯನ್ನು ಆಚರಿಸುವುದರೊಂದಿಗೆ ರೋಗ ಮುಕ್ತರಾಗಲು ಆಸಕ್ತಿ ವಹಿಸಿ ಪಾಲ್ಗೊಳ್ಳಬೇಕೆಂದು ಯೋಗ ಮಂದಿರದ ಪ್ರಕಟಣೆ ತಿಳಿಸುತ್ತದೆ.