ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಹೊನಗದ್ದೆ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ರಸ್ತೆ ಕುಸಿಯುವ ಭೀತಿ ಇದ್ದು, ಈ ಪ್ರದೇಶಕ್ಕೆ ಗ್ರಾಮ ಪಂಚಾಯಿತಿಯ ಪ್ರಕೃತಿ ವಿಕೋಪ ನಿರ್ವಹಣೆ ಉಸ್ತುವಾರಿ ಅಧಿಕಾರಿ ಮನೀಶ ನಾಯಕ ಭೇಟಿ ನೀಡಿ ಪರಿಶೀಲಿಸಿದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಿ.ಜಿ.ಭಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಇಲ್ಲಿ ರಸ್ತೆ ಕುಸಿದರೆ, ಅಮಗಾಂವ್, ಹೊನಗದ್ದೆ ,ಕಂಚಿಮನೆ, ಕಂಚಿಕುಂಬ್ರಿ, ಗಡುಗದ್ದೆ, ಹೊಂಡಬೈಲ್,ವತೋಟ್ಮನೆ ಭಾಗದ ಸಂಪರ್ಕ ಕಡಿತ ಆಗಲಿದೆ. ರಸ್ತೆಯನ್ನು ಹಿಂದೆ ಸರಿಸಿ, ದೇವಸ್ಥಾನಕ್ಕೆ ಹಾಗೂ ಸಾರ್ವಜನಿಕರ ಸಂಪರ್ಕಕ್ಕೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರ ಪರವಾಗಿ ಆಗ್ರಹಿಸಿದರು.
ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ಮನೀಶ ನಾಯಕ ಭರವಸೆ ನೀಡಿದರು.
ರಸ್ತೆ ಕುಸಿಯುವ ಭೀತಿ: ಶೀಘ್ರ ಕ್ರಮಕ್ಕೆ ಆಗ್ರಹ
