ಹಳಿಯಾಳ: ಮನೆಯ ಪಕ್ಕದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದು ಅದನ್ನು ಕತ್ತರಿಸಿ ಗೊಬ್ಬರದ ಚೀಲದಲ್ಲಿ ಹಾಕಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದ ದಾಂಡೇಲಿ ಗ್ರಾಮೀಣ ಠಾಣೆಯ ಪೋಲಿಸರು ದಾಳಿ ನಡೆಸಿ 50 ಸಾವಿರ ಮೌಲ್ಯದ 1.805 ಕೆಜಿ ಗಾಂಜಾ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ಗಾಂವಠಾಣ ಗ್ರಾಮದ ಜಾನು ದೂಳು ಪಂಗಡೆ (43) ಆಕ್ರಮವಾಗಿ ಗಾಂಜಾ ಬೆಳೆದು ಮಾರಾಟ ಮಾಡಲು ಯತ್ನಿಸಿದ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯ ಮೇಲೆ ಎನ್‌ಡಿಪಿಎಸ್ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ದಾಳಿಯ ಸಂದರ್ಭದಲ್ಲಿ ಗ್ರಾಮೀಣ ಠಾಣೆಯ ಪಿಎಸೈ ಐ. ಆರ್.ಗಡೇಕರ, ಪೊಲೀಸ್ ಸಿಬ್ಬಂದಿಗಳಾದ ಉಮೇಶ ತುಂಬರಗಿ, ವೆಂಕಟೇಶ ತೆಗ್ಗಿನ, ಮಲ್ಲಿಕಾರ್ಜುನ, ರಾಘವೇಂದ್ರ, ರವಿ ಮೊದಲಾದವರು ಉಪಸ್ಥಿತರಿದ್ದರು. ಅಪರಾಧ ವಿಭಾಗದ ಪಿಎಎಸೈ ಯಲ್ಲಾಲಿಂಗ ಕುನ್ನೂರ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಅಕ್ರಮವಾಗಿ ಗಾಂಜಾ ಬೆಳೆದು ಮಾರಾಟಕ್ಕೆ ಯತ್ನ: ಆರೋಪಿ ಬಂಧನ
