ಯಲ್ಲಾಪುರ: ತಾಲೂಕು ಆಡಳಿತ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ತಾಲೂಕು ಪಂಚಾಯಿತಿ ಮತ್ತು ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಲೊಯೋಲ ವಿಕಾಸ ಕೇಂದ್ರದ ಸಭಾಭವನದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಕೇಶವ ಕೆ.ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಾವು ಮಕ್ಕಳನ್ನು ದುಡಿಸುವ ಬದಲು ಅವರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು.ನಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸಬೇಕೆಂದರೆ, ಸಮಾಜಕ್ಕೆ ಮಾದರಿಯಾಗಬೇಕು. ಇದಕ್ಕಾಗಿ ಮೊದಲು ಕಾನೂನಿನ ಅರಿವನ್ನು ಹೊಂದಬೇಕು ಎಂದರು.
ತಹಸೀಲ್ದಾರ ಶ್ರೀಧರ ಮುಂದಲಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, 16 ವರ್ಷದ ಒಳಗಿನ ಪ್ರತಿಯೊಬ್ಬಮಗುವಿಗೂ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು. ಬಾಲ ಕಾರ್ಮಿಕ ಮಕ್ಕಳು ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿದ್ದ ವಿಷಯ ತಮ್ಮಗಮನಕ್ಕೆ ಬಂದರೆ ಕೂಡಲೇ ಕಾರ್ಮಿಕ ಇಲಾಖೆಗೆ ತಿಳಿಸಿ, ಆ ಮಕ್ಕಳು ಯಾವ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಅವರ ಕುಂದು ಕೊರತೆಗಳಿಗೆ ನಾವು ಸ್ಪಂದಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಎಚ್.ಎಫ್.ಇಂಗಳೆ, ಕಾರ್ಮಿಕ ನಿರೀಕ್ಷಕಿ ಅನುರಾಧ ಕಾಕತ್ಕರ, ಫಾ. ಅನಿಲ ಡಿಸೋಜಾ, ಸಿಸ್ಟರ್ ಐರಿನ್ ಡಿಸೋಜಾ ಮತ್ತು ಮಾನಸಿಂಗ್ ರಾಠೋಡ ಹಾಗೂ ವಿವಿಧ ಹೋಟೆಲ್‌ಗಳ ಮಾಲೀಕರು ಕಾರ್ಮಿಕರು ಮಕ್ಕಳು ಹಾಗೂ ಲೋಯೊಲಾ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು, ಮಂಗಳಾ ಮೋರೆ ಮತ್ತು ಮಲ್ಲಮ್ಮ ನೀರಲಗಿ ಪ್ರಾರ್ಥಿಸಿದರು. ಗೋಪಾಲ ಕರ್ಜಗಿ ಸ್ವಾಗತಿಸಿದರು. ಛಾಯಪ್ಪ ಲಮಾಣಿ ನಿರೂಪಿಸಿದರು. ಮಲ್ಲಮ್ಮ ನೀರಲಗಿ ವಂದಿಸಿದರು.