ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ‘ನಾದ ಸಮರ್ಪಣ’ ಸಂಗೀತ ಕಾರ್ಯಕ್ರಮ ಭಾನುವಾರ ನಡೆಯಿತು.
ಮಠದ ಆಡಳಿತ ಮಂಡಳಿ ಮತ್ತು ಕುಮಟಾ-ಹೊನ್ನಾವರ ಸಂಗೀತ ಮಿತ್ರವೃಂದವರಿಂದ ಲೋಕೇಶ ಹೆಗಡೆ ಹಳೇಮನೆ ಸಾಲ್ಕೋಡ ಅವರ ಸಂಯೋಜನೆಯಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ನಡೆದ ಸಂಗೀತ ಕಾರ್ಯಕ್ರಮವನ್ನು ಮಠದ ಅಧ್ಯಕ್ಷ ಜಿ.ಎಂ.ಹೆಗಡೆ ಹೆಗ್ನೂರು ಉದ್ಘಾಟಿಸಿದರು. ರಘುಪತಿ ಹೆಗಡೆ ಹಾಲೇಗೌರಿ, ಸವಿತಾ ಹೆಗಡೆ ಹೆಗ್ನೂರು ಉಪಸ್ಥಿತರಿದ್ದರು.
ಡಾ.ಅಶೋಕ ಹುಗ್ಗಣ್ಣನವರ್, ಶ್ರೀಪಾದ ಹೆಗಡೆ ಸೋಮನಮನೆ, ಶ್ರೀಧರ ಹೆಗಡೆ ಕಲಭಾಗ, ಭಾರ್ಗವ ಹೆಗಡೆ ಶೀಗೇಹಳ್ಳಿ, ವಿನಾಯಕ ಹೆಗಡೆ ಹಿರೇಹದ್ದ, ಗೌರೀಶ ಯಾಜಿ ಕೂಜಳ್ಳಿ, ವಿಶ್ವೇಶ್ವರ ಭಟ್ಟ ಖರ್ವಾ, ಸುಪ್ರಿಯಾ ಹೆಗಡೆ ಜಾಲಿಮನೆ, ಈಶ್ವರ ಶಾಸ್ತ್ರಿ ಹೊಸಾಕುಳಿ,ಕು.ಅಂಜನಾ ಹೆಗಡೆ ಶಿರಸಿ, ಕು.ಅಕ್ಷಯ ಹೆಗಡೆ ಹರಿಕೇರಿ, ಕು.ಅನೀಷ್ ಹೆಗಡೆ ಹಿರೆಹದ್ದ, ಕು.ಆರ್ಯ ಹೆಗಡೆ ಹಿರೆಹದ್ದ, ಹರಿಶ್ಚಂದ್ರ ನಾಯ್ಕ ಇಡಗುಂಜಿ, ಭರತ್ ಹೆಗಡೆ ಹೆಬ್ಬಲಸು,ಅಜಯ್ ಹೆಗಡೆ ಶಿರಸಿ,ಪ್ರೋ.ಅನಂತಮೂರ್ತಿ ಗುಣವಂತೆ, ಶಂಕರ ಹೆಗಡೆ ಶಿರಸಿ, ಮಹೇಶ ಹೆಗಡೆ ಹೊಸಗದ್ದೆ, ಪರಮೇಶ್ವರ ಹೆಗಡೆ ಗೇರಸೊಪ್ಪ, ಗಣಪತಿ ಹೆಗಡೆ ಹರಿಕೇರಿ, ಶೇಷಾದ್ರಿ ಅಯ್ಯಂಗಾರ ಮಂಕಿ, ಅಕ್ಷಯ ಭಟ್ಟ ಹಂಸಳ್ಳಿ ಮತ್ತಿತರರ ಕಲಾವಿದರು ಪಾಲ್ಗೊಂಡಿದ್ದರು. ಗಣೇಶ ಹೆಗಡೆ ಬಿಳೇಕಲ್ ಕಾರ್ಯಕ್ರಮ ನಿರ್ವಹಿಸಿದರು.