• first
    second
    third
    previous arrow
    next arrow
  • ಉರ್ದು ಅಂಗನವಾಡಿ, ಪ.ಪೂರ್ವ ಕಾಲೇಜು ಸ್ಥಾಪನೆಗೆ ಸಭೆ

    300x250 AD

    ಸಿದ್ದಾಪುರ: ಸ್ಥಳೀಯ ಶಾದಿಮಹಲ್‌ನಲ್ಲಿ ನಾರ್ಥ್ ಕೆನರಾ ಮುಸ್ಲಿಮ್ ಯುನೈಟೆಡ್ ಪೋರಂನ ಸಿದ್ದಾಪುರ ಘಟಕ ಆಯೋಜಿಸಿದ ಸಭೆ ಯಶಸ್ವಿಯಾಗಿ ನೆರವೇರಿತು. ಈ ಸಭೆಯಲ್ಲಿ ಮುಖ್ಯವಾಗಿ ಉರ್ದು ಎಲ್.ಕೆ.ಜಿ, ಯು.ಕೆ.ಜಿ. ಹಾಗೂ ಪದವಿಪೂರ್ವ ಕಾಲೇಜು ಸ್ಥಾಪನೆ ಕುರಿತಾಗಿ ಚರ್ಚಿಸಲಾಯಿತು.
    ತಾಲೂಕಿನಲ್ಲಿ ಉರ್ದು ಪದವಿಪೂರ್ವ ಕಾಲೇಜು ಹಾಗೂ ಅಂಗನವಾಡಿ ಇಲ್ಲದಿರುವುದರಿಂದ ಮಕ್ಕಳಿಗೆ ಮುಂದಿನ ಶಿಕ್ಷಣ ಕಲಿಕೆಗೂ ತೊಂದರೆಯಾಗುತ್ತಿರುವ ಕುರಿತಾಗಿ ಜಿಲ್ಲಾ ಹಾಗೂ ತಾಲೂಕು ಮುಖಂಡರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಇದರ ಸ್ಥಾಪನೆಗೆ ಎಲ್ಲರೂ ಸಹಕರಿಸುವಂತೆ ನಿರ್ಣಯಿಸಲಾಯಿತು.
    ಈ ಮಹತ್ವದ ಸಭೆಯಲ್ಲಿ ಪೋರಂ ಜಿಲ್ಲಾ ಅಧ್ಯಕ್ಷರಾದ ಶೇಖ್ ಅಲಿ ಮಾಜೀ ಅಧ್ಯಕ್ಷರಾದ ಬಿ.ಎಂ.ಮಲ್ಲಿಕ್, ಇಮ್ತಿಯಾಜ್ ಉಮರ್ ಶೇಖ್, ಕಾರ್ಯದರ್ಶಿ ಎ.ಕೆ ಮುಲ್ಲಾ ಪ್ರಮುಖರಾದ ಇಲಿಯಾಸ ಇಬ್ರಾಹಿಂ ಸಾಬ್, ಮೊಹಮ್ಮದ್ ಬಷೀರ್ ಸಾಬ್ ಬೇಡ್ಕಣಿ ಅಬ್ದುಲ್ ಗಫಾರ್ ಶೇಖ್, ಅಬ್ದುಲ್ ಹಾಫೀಜ್ ಶೇಖ್, ಶೇಖ್ ಮೊಹಮ್ಮದ್, ಮೊಹಮ್ಮದ್ ಗಫಾರ್ ಸಾಬ ಮುನೀರ್ ಸಾಬ್, ಮೊಹಮ್ಮದ್ ಆಸೀಫ್ ಶೇಖ್,ಜಾಫರ್ ಸಾಬ್ ಮುಂತಾದವರು ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅಬ್ದುಲ್ ಗನಿ ಸಾಬ, ಅಸ್ಲಂ ಹೊಸಳ್ಳಿ, ಹಮೀದ್ ಖಾನ್, ಅಬ್ದುಲ್ ಮಜೀದ್, ಹನೀಫ್ ಖಾನ್, ಹಂಝಾ ಖಾನ್ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಘಟಕದ ಅಧ್ಯಕ್ಷರಾದ ಆಲಂ ಖಾನ್ ಅಧ್ಯಕ್ಷತೆ ವಹಿಸಿದ್ದರು. ಅಸ್ಲಂ ಶೇಖ್ ಸ್ವಾಗತಿಸಿ ನಿರ್ವಹಿಸಿದರು. ಟಿ.ಕೆ.ಎಂ.ಆಜಾದ್ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Back to top