ಸಿದ್ದಾಪುರ; ಬೆಂಗಳೂರಿನ ಸ್ಫೂರ್ತಿ ಯುವ ಕವಿ ಬಳಗದ ವತಿಯಿಂದ ಸಹಬಾಳ್ವೆ ಪರಿಕಲ್ಪನೆಯ ಕುರಿತು ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಕವಯತ್ರಿ ಯಶಸ್ವಿನಿ ಶ್ರೀಧರ ಮೂರ್ತಿಯವರು ಪ್ರಥಮ ಸ್ಥಾನಕ್ಕೆ ಭಾಜನರಾಗಿದ್ದಾರೆ. ಶಾರದಮ್ಮ ಕೋಲಾರ ದ್ವಿತೀಯ ಸ್ಥಾನ, ರತ್ನಾ ನಾಗರಾಜ್ ತೃತೀಯ ಸ್ಥಾನ, ಭವ್ಯಾ ಎನ್. ಎಲ್. ವಿಶೇಷ ಬಹುಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಸ್ಫೂರ್ತಿ ಯುವ ಕವಿ ಬಳಗದ ಪದಾಧಿಕಾರಿಗಳಾದ ಅವಿನಾಶ್ ಕೆ. ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಶಸ್ವಿನಿ ಶ್ರೀಧರ ಮೂರ್ತಿಯವರು ಕಾನಸೂರಿನ ಶ್ರೀ ಕಾಳಿಕಾ ಭವಾನಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಹಲವಾರು ರಾಜ್ಯ ಮಟ್ಟದ ಸಾಹಿತ್ಯಕ ಸ್ಪರ್ಧೆಗಳಲ್ಲಿ ವಿಜೇತರಾಗಿರುತ್ತಾರೆ.ಹಾಗೂ ತಮ್ಮ ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಗಣಿತ ರಂಗೋಲಿಗಳಲ್ಲಿ ಮಾರ್ಗದರ್ಶನ ಮಾಡುತ್ತ ವಿದ್ಯಾರ್ಥಿಗಳಲ್ಲಿಯೂ ಸೃಜನಶೀಲತೆಯನ್ನು ಬೆಳೆಸುತ್ತಿದ್ದಾರೆ. ಇವರ ಈ ಸಾಧನೆಗೆ ಶ್ರೀ ಕಾಳಿಕಾ ಭವಾನಿ ವಿದ್ಯಾಸಂಸ್ಥೆಯ ಪದಾಧಿಕಾರಿಗಳು, ಶಾಲೆಯ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.