• first
    second
    third
    previous arrow
    next arrow
  • ಹೃದಯದ ಅಂತರಂಗದ ಭಾಷೆ ಕಾವ್ಯ-ಡಿ.ಎಸ್.ನಾಯ್ಕ

    300x250 AD

    ಯಲ್ಲಾಪುರ; ಕಾವ್ಯ ಹೃದಯದ ಅಂತರಂಗದ ಭಾಷೆಯಾಗಿದೆ.ಅದು ಮನಸ್ಸು ಮನಸ್ಸುಗಳನ್ನು ಭಾವನಾತ್ಮಕವಾಗಿ ಬೆಸೆಯುತ್ತದೆ ಎಂದು
    ಸಾಹಿತಿ ಡಿ.ಎಸ್.ನಾಯ್ಕ ಹೇಳಿದರು.
    ಅವರು ರವಿವಾರ ಕೇಂದ್ರಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಘಟಕ ದ ಆಶ್ರಯದಲ್ಲಿ ಡಾ.ನವೀನಕುಮಾರ ಅವರ ‘ಇಂಗಿತ’ ಕವನ ಸಂಕಲನ ಸಂವಾದ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಿ,ಸಾಹಿತ್ಯದ ಪ್ರೀತಿ ಎಲ್ಲರಲಿ ಬೆಳೆಯಲಿ ಎಂದರು.
    ಅಧ್ಯಕ್ಷತೆ ವಹಿಸಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಮಾತನಾಡಿ,ಹೊಸ ಬರಹಗಾರರ ಕಾವ್ಯದ ಬಗೆಗೆ ಚರ್ಚೆಯು ಪ್ರಸ್ತುತದಲ್ಲಿ ಅಗತ್ಯವಿದೆ ಅದರಿಂದ ನವೀನ ಕಾವ್ಯದ ಹುಟ್ಟಿಗೆ ಸ್ಪೂರ್ತಿ ಆಗಲು ಸಾಧ್ಯ. ಕವಿಯ ಮನದಿಂಗಿತಕ್ಕೆ ವಿಮರ್ಶೆಗೆ ಒಳಪಟ್ಟಷ್ಟು ಇನ್ನು ಪಕ್ವತೆಯ ಕವಿತೆಗಳು ಹೊರಹೊಮ್ಮಲು ಸಾಧ್ಯ ಎಂದರು.
    ಸಂವಾದದಲ್ಲಿ ಕವಿಗಳಾದ ಕೃಷ್ಣ ಪದಕಿ , ಮಹೇಶ್ ಹನಕೆರೆ ,ಸವಿತಾ ಎಸ್.ಜಿ ,ಗಣಪತಿ ವರ್ಗಾಸರ್,ಭಾಗವಹಿಸಿದ್ದರು.
    ಪುಷ್ಪಾ ಭಟ್ ಪ್ರಾರ್ಥಿಸಿದರು. ಡಾ.ನವಿನ ಕುಮಾರ ಸ್ವಾಗತಿಸಿದರು.ತ್ರೇಷಾ ನೋಹಾ ನಿರೂಪಿಸಿದರು. ಶಿಕ್ಷಕಿ ಆಶಾ ಶೆಟ್ಟಿ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Back to top