ಯಲ್ಲಾಪುರ; ಅಡಿಕೆ ತೂಕದಲ್ಲಿ ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಸಂಬಂಧ ಟಿ.ಎಸ್.ಎಸ್.ಸಂಸ್ಥೆ ಕೈಗೊಂಡಿರುವ ಧೃಢ ನಿರ್ಧಾರ ವಿರೋಧಿಸಿದ್ದ ಅಡಿಕೆ ವ್ಯಾಪಾರಸ್ಥರು ಈಗ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ವ್ಯಾಪಾರಕ್ಕೆ ತೊಡಗುವ ನಿರ್ಧಾರವನ್ನು ಪ್ರಕಟಿಸಿದ್ದಕ್ಕೆ ರೈತರ ಪರವಾಗಿ ರೈತ ಮುಖಂಡ ಪಿ.ಜಿ.ಭಟ್ಟ ಬರಗದ್ದೆ ಸ್ವಾಗತಿಸಿದ್ದಾರೆ.
ಅವರು ಈ ಕುರಿತು ರವಿವಾರ ಹೇಳಿಕೆ ನೀಡಿ,ಅಡಿಕೆ ತೂಕಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ೧೦೦,೨೦೦,೩೦೦ ಗ್ರಾಂ ಹೀಗೆ ಸಣ್ಣ ಲೆಕ್ಕವನ್ನು ವ್ಯಾಪಾರಸ್ಥರ ಲೆಕ್ಕಕ್ಕೇ ಸೇರಿಸಲಾಗುತ್ತಿತ್ತು.ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿತ್ತು.ಇದನ್ನು ಮನಗಂಡು ಸಣ್ಣ ವ್ಯತ್ಯಾಸವೂ ಆಗಬಾರದು ರೈತರಿಗೆ ಹಾನಿಯಾಗಬಾರದೆಂದು ಟಿ.ಎಸ್.ಎಸ್. ನಿರ್ಧಾರ ಕೈಗೊಂಡಿತ್ತು.
ಆದರೆ ಈ ವಿಷಯದಲ್ಲಿ ಯಲ್ಲಾಪುರದ ವ್ಯಾಪಾರಸ್ಥರು ಟಿ.ಎಸ್.ಎಸ್.ಗೆ ವ್ಯಾಪಾರಕ್ಕೆ ಹೊಗದೇ ಅಸಮದಾನ ತೋರಿದ್ದರು.ಈಗ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿದಿದ್ದು,ವ್ಯಾಪಾರ ಕೈಗೊಳ್ಳಲು ಮುಂದಾಗಿರುವ ವ್ಯಾಪರಸ್ಥರಿಗೆ ಪಿ.ಜಿ.ಭಟ್ಟ ಹಾಗೂ ರೈತ ಸಂಘದ ತಾಲೂಕಾ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಕೃತಜ್ಞತೆ ಸಲ್ಲಿಸಿದ್ದಾರೆ.