• Slide
    Slide
    Slide
    previous arrow
    next arrow
  • ಮಂಡಲ ಕಲಾಪ್ರಕಾರದಲ್ಲಿ ನೈಪುಣ್ಯತೆ ಮೆರೆದ ಲಯನ್ಸ ವಿದ್ಯಾರ್ಥಿಗಳು

    300x250 AD

    ಶಿರಸಿ; ಭಾರತ ಸರಕಾರದ ಹಣಕಾಸು ಸಚಿವಾಲಯ, ಆಯಕರ ನಿರ್ದೇಶನಾಲಯ, ಶಿರಸಿ ಆದಾಯ ತೆರಿಗೆ ಇಲಾಖೆ ಕಚೇರಿ, ಶಿರಸಿ ಲಯನ್ಸ ಕ್ಲಬ್ ಹಾಗೂ ಶಿರಸಿ ಲಿಯೋ ಕ್ಲಬ್ ಆಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ‘ಐಕಾನೀಕ್ ಸಪ್ತಾಹ’ದ ಅಂಗವಾಗಿ ಶಿರಸಿ ಲಯನ್ಸ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮಂಡಲ ಕಲಾಪ್ರಕಾರದ ಪ್ರದರ್ಶನ ಹಾಗೂ ಕಲಾರಚನೆಯ ಸ್ಫರ್ಧೆ ಆಯೋಜಿಸಲಾಗಿತ್ತು. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮ ಕಲಾನೈಪುಣ್ಯತೆ ಪ್ರದರ್ಶಿಸಿದರು. ಕು. ಸ್ಪೂರ್ತಿ ಹೆಗಡೆ ಪ್ರಥಮ ಸ್ಥಾನ,ಕು.ಅನನ್ಯಾ ಹೆಗಡೆ ಹಾಗೂ ಕು.ನ್ಯಾನ್ಸಿ ದ್ವಿತೀಯ ಸ್ಥಾನ, ಕು. ಸ್ಪೂರ್ತಿ.ಜಿ. ಹಾಗೂ ಕು.ಅನಘಾ ತೃತೀಯ ಸ್ಥಾನ ಪಡೆದರು. ಶಿರಸಿ ಆದಾಯ ತೆರಿಗೆ ಅಧಿಕಾರಿಗಳಾದ ವಿ.ಎಸ್. ಉಪ್ಪಿನ ಹಾಗೂ ಪಿ.ಎಲ್.ಕುಂದಾಪುರ, ಶೈಜೇಶ್ ಕೆ. ನಿರ್ಣಾಯಕರಾಗಿ ಭಾಗವಹಿಸಿದರು.

    ಶಿರಸಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಸಿ.ಎ. ಎಂ.ಜೆ.ಎಫ್. ಲಯನ್ ಉದಯ ಸ್ವಾದಿ, ಸಿ.ಎ. ಮಂಜುನಾಥ ಶೆಟ್ಟಿ ಬಹುಮಾನಗಳನ್ನು ಪ್ರಾಯೋಜಿಸಿದರು. ಶಿರಸಿ ಲಯನ್ಸ ಕ್ಲಬ್ ಕಾರ್ಯದರ್ಶಿ ಲಯನ್ ವಿನಯ ಹೆಗಡೆ ಬಸವನಕಟ್ಟೆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ ನಿರೂಪಿಸಿದರು. ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಎಂ.ಜೆ.ಎಫ್. ಲಯನ್ ಪ್ರಭಾಕರ ಹೆಗಡೆ, ಲಯನ್ ಜ್ಯೋತಿ ಹೆಗಡೆ, ಶಿರಸಿ ಲಯನ್ಸ ಶಾಲಾ ಮುಖ್ಯಾಧ್ಯಾಪಕರಾದ ಶಶಾಂಕ ಹೆಗಡೆ, ಆದಾಯ ತೆರಿಗೆ ಕಚೇರಿಯ ಸಿಬ್ಬಂದಿ ವರ್ಗ, ಲಯನ್ಸ ಶಾಲಾ ಶಿಕ್ಷಕವೃಂದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top