ಕಾರವಾರ: ತಾಲ್ಲೂಕಿನ ಗೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಗದ್ದೆ ಎಂಬಲ್ಲಿ ರಸ್ತೆಯಿಂದ ನಡೆದು ಹೋಗುವಾಗ ವಿದ್ಯುತ್ ತಂತಿ ಅರ್ಥಿಂಗ್ ಹರಿದು ರೈತ ಸಾವಿಗೀಡಾಗಿದ್ದು ನಿಜಕ್ಕೂ ಅತ್ಯಂತ ಬೇಸರ ಸಂಗತಿಯಾಗಿದೆ. ಕೇವಲ ನಾಲ್ಕು- ಐದು ತಿಂಗಳ ಅಂತರದಲ್ಲಿ ಈ ಭಾಗದಲ್ಲಿ ಇದು ಎರಡನೇ ಘಟನೆಯಾಗಿದೆ.
ಗ್ರಾಮೀಣ ಭಾಗದಲ್ಲಿ ಕೆಲವು ಕಡೆ ಇಂತಹ ಆಘಾತದಿಂದ ರೈತರು ಸ್ವಲ್ಪದರಲ್ಲಿ ಪಾರಾದ ಅನೇಕ ಘಟನೆಗಳು ನಡೆದಿದೆ. ಇದಕ್ಕೆ ಹೆಸ್ಕಾಂನ ಬೇಜಾಬ್ದಾರಿತನ ಹಾಗೂ ನಿರ್ಲಕ್ಷವೇ ಕಾರಣವಾಗಿದೆ. ಸಾವಿಗೀಡಾದ ರೈತನಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಹೆಸ್ಕಾಂ ಕಚೇರಿ ಎದುರು ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಲಾಗುವುದೆಂದು ಜಿಲ್ಲಾಧ್ಯಕ್ಷ ದಿಲೀಪ್ ಜಿ.ಅರ್ಗೇಕರ್ ಎಚ್ಚರಿಕೆ ನೀಡಿದ್ದಾರೆ.