• Slide
    Slide
    Slide
    previous arrow
    next arrow
  • ಪ್ರವಾಸಿಗರ ಕಣ್ಮನ ಸೆಳೆಯುವ ಕಂಚಿಕಲ್ಲು ಗುಡ್ಡ

    300x250 AD

    ಜೊಯಿಡಾ: ಜೊಯಿಡಾ ತಾಲೂಕಿನ ಗುಂದ ಅರಣ್ಯ ವ್ಯಾಪ್ತಿಗೆ ಬರುವ ಕಂಚಿಕಲ್ಲು ಗುಡ್ಡ ಪ್ರವಾಸಿಗರ ಆಕರ್ಷಣೆಯ ಸ್ಥಳವಾಗಿದೆ. ಸುತ್ತಲು ಸ್ವಚ್ಚಂದ ಪರಿಸರ, ಗುಡ್ಡದ ಕೆಳಭಾಗದಲ್ಲಿ ಕಾಳಿ ನದಿಯ ಹಿನ್ನೀರು, ಪ್ರಾಣಿ- ಪಕ್ಷಿಗಳ ಕಲರವ, ಹಚ್ಚ ಹಸಿರಿನಿಂದ ಕೂಡಿದ ಕಾಡು ಕಂಚಿಕಲ್ಲು ಗುಡ್ಡದ ವಿಶೇಷ.
    ಗುಂದ ಅರಣ್ಯದಲ್ಲಿರುವ ಕಂಚಿಕಲ್ಲು ಗುಡ್ಡ ನೋಡಲು ಅದ್ಬುತವಾಗಿದ್ದು ಪ್ರವಾಸಿಗರ ಗಮನ ಸೆಳೆಯುವ ಹಾಗಿದೆ. ಒಂದೇ ಕಲ್ಲಿನಿಂದ ನಿರ್ಮಿತವಾದ ಅದ್ಭುತ ಬಂಡೆ ಇದಾಗಿದ್ದು, ಯರಮುಖ ಗ್ರಾಮದಿಂದ 3 ಕಿ.ಮೀ. ದೂರದಲ್ಲಿದೆ. ಸಿಂಥೇರಿ ರಾಕ್ಸ್ ನಿಂದ 20 ಕಿ.ಮೀ. ದೂರದಲ್ಲಿದೆ. ಉಳವಿಗೆ ಸಾಗುವ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಬಹುದು.
    ಈ ಪ್ರವಾಸಿ ತಾಣವು ಅರಣ್ಯದ ಒಳ ಭಾಗದಲ್ಲಿ ಇರುವುದರಿಂದ ಅಷ್ಟೊಂದು ಪ್ರಸಿದ್ಧಿ ಪಡೆದಿಲ್ಲ, ಮಳೆಗಾಲದಲ್ಲಿ ಈ ಪ್ರವಾಸಿ ತಾಣಕ್ಕೆ ಸಾಗುವುದು ಕಷ್ಟ ಸಾಧ್ಯ. ಮಣ್ಣಿನ ರಸ್ತೆಯಾದ್ದರಿಂದ ಮಳೆಗಾಲದಲ್ಲಿ ಯಾವುದೇ ವಾಹನ ಇಲ್ಲಿಗೆ ಸಾಗುವುದಿಲ್ಲ. ಬೇಸಿಗೆಯಲ್ಲಿ ಕಂಚಿಕಲ್ಲು ಗುಡ್ಡದವರೆಗೂ ಸಾಗಬಹುದಾಗಿದೆ. ಮಕ್ಕಳು, ವೃದ್ಧರೂ ಯಾರು ಬೇಕಾದರೂ ಈ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಬಹುದು.
    ವಾಹನವು ಕಂಚಿ ಕಲ್ಲು ಗುಡ್ಡದವರೆಗೆ ಸಾಗುವುದರಿಂದ ನಡೆಯಬೇಕಾದ ಅವಶ್ಯಕತೆ ಇಲ್ಲ. ಅರಣ್ಯ ಇಲಾಖೆಯಿಂದ ಬಂದ ಪ್ರವಾಸಿಗರಿಗೆ ಟಿಕೆಟ್ ಇಟ್ಟು ವಾಹನದ ಮೂಲಕ ಸಫಾರಿ ಮಾಡಿಸುವುದರಿಂದ ಈ ಸ್ಥಳದ ಅಭಿವೃದ್ದಿ ಮಾಡಬಹುದು ಮತ್ತು ಸರ್ಕಾರಕ್ಕೂ ಆದಾಯ ಸಿಗಬಹುದು. ಈಗಾಗಲೇ ಇಲ್ಲಿ ಅರಣ್ಯ ಇಲಾಕೆಯಿಂದ ಪ್ರವಾಸಿಗರು ಕುಳಿತುಕೊಳ್ಳಲು ಗೋಪುರವೊಂದನ್ನು ನಿರ್ಮಿಸಿದ್ದು, ಊರಿನ ಬಹಳಷ್ಟು ಜನರು ಕಂಚಿಕಲ್ಲು ಗುಡ್ಡಕ್ಕೆ ಪಿಕ್‌ನಿಕ್‌ಗೆ ಸಾಗುತ್ತಾರೆ. ಪರಿಸರ ಅಭಿವೃದ್ಧಿ ಸಮಿತಿ ವತಿಯಿಂದ ಕಂಚಿಕಲ್ಲು ಗುಡ್ಡದ ಅಭಿವೃದ್ಧಿ ಮಾಡಬಹುದಾಗಿದ್ದು, ಹೀಗೆ ಮಾಡುವುದರಿಂದ ಇಲ್ಲಿನ ಸ್ಥಳೀಯರಿಗೂ ಕೆಲಸ ಸಿಗುತ್ತದೆ ಎನ್ನುತ್ತಾರೆ ಸ್ಥಳೀಯರು.

    ಕೋಟ್…
    ಕಂಚಿಕಲ್ಲು ಗುಡ್ಡವನ್ನು ಅಭಿವೃದ್ಧಿ ಪಡಿಸಬೇಕಾದರೆ ಪರಿಸರ ಅಭಿವೃದ್ಧಿ ಸಮಿತಿ ವತಿಯಿಂದ ನಮ್ಮ ಇಲಾಖೆಗೆ ತಿಳಿಸಿದಲ್ಲಿ ಹಿರಿಯ ಅರಣ್ಯಾಧಿಕಾರಿಗಳ ಆದೇಶದ ಮೇರೆಗೆ ಪ್ರವಾಸಿ ಸ್ಥಳವನ್ನು ಅಭಿವೃದ್ಧಿಪಡಿಸಬಹುದಾಗಿದೆ.–* ರವಿಕಿರಣ್ ಸಂಪಗಾವಿ, ವಲಯ ಅರಣ್ಯಾಧಿಕಾರಿ ಗುಂದ

    300x250 AD

    ಕಂಚಿಕಲ್ಲು ಗುಡ್ಡ ಉತ್ತಮ ಪ್ರವಾಸಿ ತಾಣವಾಗಿದ್ದು, ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ. ಪರಿಸರ ಅಭಿವೃದ್ಧಿ ಸಮಿತಿ ವತಿಯಿಂದ ಇಲ್ಲಿನ ಸ್ಥಳವನ್ನು ಅಭಿವೃದ್ಧಿಪಡಿಸಿ ಸರ್ಕಾರಕ್ಕೆ ಮತ್ತು ಸ್ಥಳೀಯರಿಗೆ ಆದಾಯ ಸಿಗಬಹುದಾಗಿದೆ.–* ಹರೀಶ್ ಭಟ್ಟ, ಸ್ಥಳೀಯರು

    Share This
    300x250 AD
    300x250 AD
    300x250 AD
    Leaderboard Ad
    Back to top