• first
    second
    third
    previous arrow
    next arrow
  • ಪುರಾತನ ಭಗ್ನ ದೇವಾಲಯದ ಬಳಿ ನಿಧಿಗಾಗಿ ಶೋಧ:ತನಿಖೆಗೆ ಆಗ್ರಹ

    300x250 AD

    ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಹೊನಗದ್ದೆ ಸಮೀಪದ ಗಡುಗದ್ದೆ ಬಳಿ ಇರುವ ಪುರಾತನ ಭಗ್ನ ದೇವಾಲಯದ ಬಳಿ ದುಷ್ಕರ್ಮಿಗಳು ನಿಧಿಗಾಗಿ ಶೋಧ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
    ಗಡುಗದ್ದೆ ಬಳಿ ಸುಮಾರು ಒಂದೂವರೆ ಸಾವಿರ ವರ್ಷಗಳ ಹಿಂದಿನ ಶಿವ ದೇವಾಲಯ ಭಗ್ನಗೊಂಡ ಸ್ಥಿತಿಯಲ್ಲಿ ಇದ್ದು, ಅದರ ಬಳಿ ನಿಧಿಗಾಗಿ ಹೊಂಡ ತೆಗೆದು ಶೋಧ ನಡೆಸಲಾಗಿದೆ. ಎರಡು ಶಿವ ಲಿಂಗಗಳು, ವರಗಣಪತಿ ಮೂರ್ತಿ, ಮಣ್ಣಿನಲ್ಲಿ ಅರ್ಧದಷ್ಟು ಹೂತಿರುವ ನಂದಿ ಪ್ರತಿಮೆ, ಭಗ್ನವಾಗಿರುವ ವ್ಯಾಘ್ರ ಪ್ರತಿಮೆ ಹಾಗೂ ಪುರಾತನ ಕಾಲದ ಇಟ್ಟಿಗೆಗಳಿವೆ.
    ಮೂರ್ತಿಗಳ ಹಿಂಭಾಗದಲ್ಲಿ ಹೊಂಡ ತೆಗೆದು ನಿಧಿಗಾಗಿ ಶೋಧ ನಡೆಸಲಾಗಿದ್ದು, ನಂತರ ಮತ್ತೆ ಹೊಂಡ ಮುಚ್ಚಲಾಗಿದೆ. ನಿಧಿಗಳ್ಳರಿಗೆ ನಿಧಿ ಸಿಕ್ಕಿದೆಯೊ, ಇಲ್ಲವೊ ಎಂದು ತಿಳಿದಿಲ್ಲ. ಪುರಾತನ ದೇವಾಲಯದ ಬಳಿ ನಿಧಿಶೋಧ ಕಾರ್ಯ ನಡೆದಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ, ತನಿಖೆ ನಡೆಸಬೇಕೆಂದು ಹೊನಗದ್ದೆ ವೀರಭದ್ರ ದೇವಸ್ಥಾನದ ಅಧ್ಯಕ್ಷ ಡಿ.ಜಿ.ಭಟ್ಟ ಆಗ್ರಹಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top