ಯಲ್ಲಾಪುರ: ತಾಲೂಕಿನ ಬಿಸಗೋಡ ಸರ್ಕಾರಿ ಪ್ರೌಢಶಾಲೆಯಲ್ಲಿ ನಿತ್ಯ ಬಳಕೆಯ ರಾಸಾಯನಿಕ ವಸ್ತುಗಳ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.
ಶಾಲೆಯ ಹಳೆಯ ವಿದ್ಯಾರ್ಥಿ, ಪ್ರಸ್ತುತ ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಎಂ.ಎಸ್.ಸಿ ವ್ಯಾಸಂಗ ಮಾಡುತ್ತಿರುವ ಕೆ.ನಾಗರಾಜ ಹೆಗಡೆ ಚಿಕ್ಕೊರಗಿ ಮಾಹಿತಿ ನೀಡಿದರು. ವಿಜ್ಞಾನದ ವಿದ್ಯಾರ್ಥಿಗಳು, ವಿಜ್ಞಾನಿಗಳಿಗೆ ಮಾತ್ರ ರಾಸಾಯನಿಕಗಳ ಬಳಕೆ ಅಗತ್ಯವಲ್ಲ. ಮನೆಗಳಲ್ಲಿ ದಿನನಿತ್ಯ ಬಳಕೆ ಮಾಡುವ ರಾಸಾಯನಿಕಗಳ ಬಗ್ಗೆ ಜನಸಾಮಾನ್ಯರಿಗೂ ಮಾಹಿತಿ ಇರಬೇಕು. ದಿನಬಳಕೆಯ ರಾಸಾಯನಿಕಗಳ ಕುರಿತು ತಿಳಿದು, ಬಳಕೆಯಲ್ಲಿ ಎಚ್ಚರ ವಹಿಸುವುದು ಅಗತ್ಯ ಎಂದರು.
ಮುಖ್ಯಾಧ್ಯಾಪಕ ಎಂ.ಆರ್.ನಾಯಕ, ವಿಜ್ಞಾನ ಶಿಕ್ಷಕ ಸದಾನಂದ ದಬಗಾರ ಹಾಗೂ ಶಿಕ್ಷಕರು ಇದ್ದರು.
ನಿತ್ಯ ಬಳಕೆಯ ರಾಸಾಯನಿಕ ವಸ್ತುಗಳ ಕುರಿತು ಮಾಹಿತಿ ಕಾರ್ಯಕ್ರಮ
