ಯಲ್ಲಾಪುರ:ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿಸಲು ಉತ್ತಮ ಪರಿಸರ ಅವಶ್ಯಕತೆ ಇದೆ ಎಂದು ಡಿಡಿಪಿಐ ಪಿ.ಬಸವರಾಜು ಹೇಳಿದರು.
ಅವರು ಶನಿವಾರ ಪಟ್ಟಣದ ಮಾದರಿ ಶಾಲೆಯ ಆವರಣದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಅರಣ್ಯ ಇಲಾಖೆ, ಇವರ ಬೀಜ ಬಿತ್ತೋಣ ಅರಣ್ಯ ಬೆಳೆಸುವ ಕಾರ‍್ಯಕ್ರಮದಲ್ಲಿ ಭಾಗವಹಿಸಿ,ವನಮಹೋತ್ಸವ ನೆರವೇರಿಸಿ ಮಾತನಾಡಿದರು.
ಆಧುನೀಕರಣದ ಧಾವಂತದಲ್ಲಿ ಪರಿಸರ ಪ್ರಜ್ಞೆ ಮರೆತು ಪರಿಸರ ಅಪಮೌಲೀಕರಣಗೊಳಿಸುವುದು ದುರಂತಕ್ಕೆ ಕಾರಣವಾಗಿದೆ. ಭವಿಷ್ಯ ಉತ್ತಮವಾಗಿರಲು ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಬಿಇಒ ಎನ್ ಆರ್ ಹೆಗಡೆ ಮಾತನಾಡಿ, ಭೂಮಿಯನ್ನು ರಕ್ಷಿಸಲು ಒಂದಾದರೂ ಸಸಿಯನ್ನು ನೆಟ್ಟು ಸುಂದರ ಪರಿಸರ ನಿರ್ಮಿಸಿಕೊಳ್ಳಬೇಕು ಎಂದರು.
ಎಸಿಎಫ್ ಆನಂದ ಎಚ್,ಶಮಾ ಭಾರ ಗ್ಯಾಸ್ ಎಜನ್ಸಿಯ ಮಾಲಕ ಎ.ಎ.ಶೇಖ್ ಸ್ಕೌಟ ಗೈಡ್ ತಾಲೂಕಾ ಅಧ್ಯಕ್ಷ ನಂದನ ಬಾಳಗಿ, ಎಸ್.ಡಿ.ಎಂಸಿ ಅಧ್ಯಕ್ಷ ನಾಗರಾಜ್,ಮುಖ್ಯಾಧ್ಯಾಪಕ ಜಗದೀಶ್ ನಾಯ್ಕರ್,ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ವಿನೋದ ನಾಯ್ಕ,ಡಿಒಸಿ ವೀರೇಶ್ ಮಾದರ ಉಪಸ್ಥಿತರಿದ್ದರು.
ಸ್ಕೌಟ್ ತಾಲೂಕಾ ಸಂಘಟಕ ಸುಧಾಕರ ಜಿ.ನಾಯಕ ಸ್ವಾಗತಿಸಿದರು.ಶಿಕ್ಷಕ ಚಂದ್ರಶೇಖರ ವಂದಿಸಿದರು.