ಹೊನ್ನಾವರ: ಪಟ್ಟಣದ ವಿವಿಧಡೆ ವಿಧಾನಪರಿಷತ್ ಚುನಾವಣಾ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಅವರ ಪರ ಪ್ರಚಾರ ಬಿಜೆಪಿ ಕಾರ್ಯಕರ್ತರು ನಡೆಸಿದರು.
ಏಳು ಬಾರಿ ಗೆದ್ದ ದಾಖಲೆ ಹೊಂದಿರುವ ಹೊರಟ್ಟಿ ಅವರು ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಬಹುತೇಕ ಶಿಕ್ಷಕರಿಗೂ ಅವರ ಕಾರ್ಯ ವೈಖರಿ ಬಗ್ಗೆ ತಿಳಿದಿದೆ. ಹಾಗಾಗಿ ಈ ಬಾರಿಯೂ ಕೂಡ ಅಧಿಕ ಮತಗಳಿಂದ ಜಯಗಳಿಸಲು ಎಲ್ಲಾ ಶಿಕ್ಷಕರು ಅವರನ್ನು ಬೆಂಬಲಿಸಬೇಕು ಎಂದು ಬಿಜೆಪಿ ತಾಲೂಕ ಅಧ್ಯಕ್ಷ ರಾಜು ಭಂಡಾರಿ ಹೇಳಿದರು. ಪಟ್ಟಣದ ಎಸ್.ಡಿ.ಎಂ.ಪದವಿಪೂರ್ವ ಹಾಗೂ ಪದವಿ ಕಾಲೇಜು, ಸರ್ಕಾರಿ ಪದವಿ ಕಾಲೇಜು, ಮೋಹನ ಕೆ.ಶೆಟ್ಟಿ ಪದವಿ ಪೂರ್ವ ಕಾಲೇಜು, ನ್ಯೂ ಇಂಗ್ಲೀಷ್ ಶಾಲೆ, ಮಾರ್ಥೊಮಾ ಶಾಲೆ ಸೇರಿದಂತೆ ವಿವಿಧಡೆ ಪ್ರಚಾರ ನಡೆಸಿದರು. ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀಕಲಾ ಶಾಸ್ತ್ರಿ, ಎಂ.ಎಸ್.ಹೆಗಡೆ ಉಮೇಶ ನಾಯ್ಕ, ಗಣೇಶ ಪೈ ಮತ್ತಿತರರು ಹಾಜರಿದ್ದರು.
ಬಸವರಾಜ್ ಹೊರಟ್ಟಿ ಪರ ಬಿಜೆಪಿ ಕಾರ್ಯಕರ್ತರ ಪ್ರಚಾರ
