ಅಂಕೋಲಾ: ಮೀನುಗಾರರ ಪ್ರಶ್ನಾತೀತ ಮುಖಂಡರಾದ ಯಶಪಾಲ್ ಸುವರ್ಣ ಅವರಿಗೆ ಇನ್‌ಸ್ಟಾçಗ್ರಾಂ ಖಾತೆಯಲ್ಲಿ ಹತ್ಯೆ ಬೆದರಿಕೆ ಮಾಡಿ, ತಲೆ ಕಡಿದವರಿಗೆ 10 ಲಕ್ಷ ನೀಡುವ ಬಹಿರಂಗ ಪೋಸ್ಟ್ ಮಾಡಿರುವುದಕ್ಕೆ ಮೀನುಗಾರರ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತ ಹರಿಹರ ಹರಿಕಾಂತ ಹಿಲ್ಲೂರ ಅವರು ಖಂಡಿಸಿದ್ದಾರೆ.
ಮೀನುಗಾರ ಮುಖಂಡರಾದ ಯಶಪಾಲ್ ಸುವರ್ಣ ಅವರು ಅನೇಕ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತಾವು ದುಡಿಸಿಕೊಂಡು ದಕ್ಷಿಣ ಕನ್ನಡ, ಉಡುಪಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮೀನುಗಾರರ ಏಳಿಗೆಗೆ ಹಗಲಿರುಳು ದುಡಿದು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಧಾರ್ಮಿಕ, ಸಾಮಾಜಿಕ, ಸಹಕಾರಿ, ರಾಜಕೀಯ ಮುಖಂಡರಾದ ಗುರುತಿಸಿಕೊಂಡಿರುವ ಇವರಿಗೆ ಬೆದರಿಕೆ ಹಾಕಿರುವ ಕೃತ್ಯವು ಸಮಸ್ತ ಮೀನುಗಾರರ ಸಮುದಾಯವು ತೀವೃವಾಗಿ ಖಂಡಿಸುತ್ತದೆ ಹಾಗೂ ಬೆದರಿಕೆ ಹಾಕಿರುವ ದುಷ್ಕರ್ಮಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.