ಸಿದ್ದಾಪುರ: ಪಟ್ಟಣದ ಹೊಸೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವದಿಂದ ಸ್ವರ್ಣಿಮ ಭಾರತದ ಕಡೆಗೆ ಅಂತರರಾಷ್ಟ್ರೀಯ ಯೋಗದಿವಸದ ಅಂಗವಾಗಿ ರಾಜಯೋಗ ಶಿಬಿರ ಹಾಗೂ ಯೋಗಾಸನ ಶಿಬಿರ ಮಂಗಳವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜಯೋಗಿನಿ ಬಿ.ಕೆ.ವೀಣಾಜಿ ಯೋಗಾಸನದ ಜತೆಗೆ ಮಾನಸಿಕವಾಗಿ ಯೋಗಬಲ ಬೆಳೆಸಿಕೊಳ್ಳುವುದಕ್ಕೆ ಶಿಕ್ಷಣ ಮುಖ್ಯ. ಮಕ್ಕಳು ಹೆಚ್ಚಿನ ಅಂಕಗಳಿಸುವುದರ ಜತೆಗೆ ಜೀವನದ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಮನೋಬಲ, ರಾಜಯೋಗ ಮತ್ತು ಯೋಗಾಸನ ಕಲಿಯಲು ಪಾಲಕರು ಪ್ರೇರೇಪಣೆ ನೀಡಬೇಕೆಂದರು.
ಯೋಗ ಶಿಕ್ಷಕ ಮಂಜುನಾಥ ನಾಯ್ಕ ಯೋಗಾಸನ ಕಲಿಯುವುದರಿಂದ ಆಗುವ ಪ್ರಯೋಜನ, ಮಾನಸಿಕ ಸ್ಥಿರತೆ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕ ಮಂಜುನಾಥ ನಾಯ್ಕ, ವೀಣಾ ಶೇಟ್,ಅನಿತಾ ಹೆಂದ್ರೆ, ಸಾವಿತ್ರಿ ಅವದಾನಿ,ಗೀತಾ ಹೆಗಡೆ, ಸುವರ್ಣ ಹೆಗಡೆ, ಶ್ರೀಲಕ್ಷ್ಮಿ ಹೆಗಡೆ, ಶಿಲ್ಪಾ ಎಂ.ನಾಯ್ಕ, ಪುಟ್ಟರಾಜ ಗೌಡರ್, ವಿನಾಯಕ ಹೆಗಡೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ತುಷಾರ್ ಶಾನಭಾಗ, ಭಾರ್ಗವ ಜಿ.ಎ, ಮಂಜುನಾಥ ಮಾರುತಿ ನಾಯ್ಕ, ರಚನಾ ಎಂ.ಎನ್. ಅವರನ್ನು ಅಭಿನಂದಿಸಲಾಯಿತು.
ವಿಜಯಲಕ್ಷ್ಮಿ ಹೆಗಡೆ ದೊಡ್ಮನೆ ಶಂಕರಮಠ, ಸವಿತಾ ಬೆಟಗೇರಿ, ಪಿ.ಬಿ.ಹೊಸೂರು,ಶಂಕರ ಭಟ್ಟ ಸಿದ್ದಾಪುರ ಇತರರಿದ್ದರು.
ಬಿ.ಕೆ.ದೇವಕಿ ಕಾರ್ಯಕ್ರಮ ನಿರ್ವಹಿಸಿದರು.
ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಾಜಯೋಗ, ಯೋಗಾಸನ ಶಿಬಿರ
