• first
  second
  third
  previous arrow
  next arrow
 • ಅಜ್ಜೀಬಳ ದತ್ತಿನಿಧಿ ಪುರಸ್ಕಾರಕ್ಕೆ ಪತ್ರಕರ್ತರಿಂದ ಬರಹ ಅಹ್ವಾನ

  300x250 AD

  ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುತ್ತಿರುವ ಅಜ್ಜೀಬಳ ದತ್ತಿನಿಧಿ ಪುರಸ್ಕಾರಕ್ಕೆ ಜಿಲ್ಲೆಯ ಪತ್ರಕರ್ತರಿಂದ ಬರಹಗಳನ್ನು ಆಹ್ವಾನಿಸಿದೆ.
  2020 ಹಾಗೂ 2021 ನೇ ಸಾಲಿನ ದತ್ತಿನಿಧಿ ಪುರಸ್ಕಾರಕ್ಕೆ ಲೇಖನ/ವರದಿಯನ್ನು ಜಿಲ್ಲೆಯ ಅರ್ಹ ಪತ್ರಕರ್ತರು ಕಳುಹಿಸಬೇಕು. 2020 ನೇ ಸಾಲಿನಲ್ಲಿ ಕೊರೋನಾ ಸಂದರ್ಭದ ವಿಶೇಷ ವರದಿ/ ಲೇಖನಗಳನ್ನು ಆಹ್ವಾನಿಸಿದೆ. 2021ನೇ ಸಾಲಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸ್ವಾತಂತ್ರ್ಯ ಚಳವಳಿ/ಹೋರಾಟಗಾರರ ಕುರಿತು ಪ್ರಕಟವಾದ ವಿಶೇಷ ವರದಿಯನ್ನು ಪುರಸ್ಕಾರಕ್ಕಾಗಿ ಆಹ್ವಾನಿಸಿದೆ.
  ಬರಹ/ಲೇಖನ ಕಳುಹಿಸಲು ಕೊನೆಯ ದಿನಾಂಕ ಜೂನ್ 20, 2022. ಲೇಖನ/ವರದಿ ಕಳುಹಿಸುವವರು ಪ್ರಕಟವಾದ ಬರಹ/ಲೇಖನದ ಒಂದು ಮೂಲ ಪ್ರತಿ ಹಾಗೂ 3 ಝೆರಾಕ್ಸ್ ಪ್ರತಿಗಳನ್ನು ಕಳುಹಿಸಬೇಕು. ವಿಳಾಸ : ಜಿ. ಸುಬ್ರಾಯ ಭಟ್ ಬಕ್ಕಳ, ಅಧ್ಯಕ್ಷರು ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಪತ್ರಿಕಾ ಭವನ, ಗಣೇಶ ನಗರ ಶಿರಸಿ- 581401
  ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಜುಲೈ 01ರಂದು ರಂದು ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಅಜ್ಜೀಬಳ ಪುರಸ್ಕಾರ ನೀಡಲಾಗುವುದು ಎಂದು ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಹಾಗೂ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top